ಲಕ್ನೋ : ಉತ್ತರ ಪ್ರದೇಶದ ಕಾನ್ಪುರದಲ್ಲಿ ಅತ್ಯಾಚಾರ ಆರೋಪಿ ಯುವತಿಯೊಬ್ಬಳ ಜೀವನದಲ್ಲಿ ಚೆಲ್ಲಾಟವಾಡಿದ್ದಲ್ಲದೇ ಯುವತಿಯ ಗಂಡನಿಗೆ ಸಿನಿಮೀಯ ರೀತಿಯಲ್ಲಿ ಸತ್ಯ ಹೇಳಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
									
			
			 
 			
 
 			
					
			        							
								
																	ಅತ್ಯಾಚಾರ ಆರೋಪಿಯನ್ನು ಸೂರಜ್ ಎಂದು ಗುರುತಿಸಲಾಗಿದೆ. ಈತ ಎರಡು ವರ್ಷಗಳ ಹಿಂದೆ ಸಂತ್ರಸ್ತ ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದ.
									
										
								
																	ಯುವತಿ ಪೋಷಕರೊಂದಿಗೆ ದೂರು ದಾಖಲಿಸಲು ಮುಂದಾದಾಗ ಆರೋಪಿ ಸೂರಜ್ ಯುವತಿಯನ್ನು ಮದುವೆಯಾಗುವುದಾಗಿ ಆಕೆಯ ತಾಯಿಗೆ ಭರವಸೆ ನೀಡಿದ್ದ.
									
											
									
			        							
								
																	ಅದಾದ 2 ತಿಂಗಳ ಬಳಿಕ ಮದುವೆಯಾಗಲು ನಿರಾಕರಿಸಿದ್ದಾನೆ. ಅಷ್ಟರಲ್ಲಾಗಲೇ ಸಂತ್ರಸ್ತ ಯುವತಿ ಗರ್ಭಿಣಿಯಾಗಿದ್ದಳು. ಹೇಗೋ ಯುವತಿಯ ತಂದೆ ಬೇರೊಬ್ಬ ಹುಡುಗನಿಗೆ ಮದುವೆ ಮಾಡಿಸಿದ್ದರು. 
									
			                     
							
							
			        							
								
																	ಯುವತಿ ಮದುವೆಯಾದ ನಂತರ ತವರು ಮನೆಗೆ ಬಂದಿದ್ದಳು. ಈ ವೇಳೆ ಆರೋಪಿ ಸೂರಜ್ ಮತ್ತೆ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ಪ್ರತಿಭಟಿಸಿದ್ದಾಳೆ.
									
			                     
							
							
			        							
								
																	ಇದರಿಂದ ಕೋಪಗೊಂಡ ಆರೋಪಿ ಯುವತಿಯ ಪತಿಗೆ `ನಿನ್ನ ಹೆಂಡತಿಯನ್ನು ಗರ್ಭಿಣಿ ಮಾಡಿದ್ದೇನೆ, ಆಕೆಯ ಹೊಟ್ಟೆಯಲ್ಲಿ ನನ್ನ ಗುರುತು ಇದೆ ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಪತಿ ಅದೇ ದಿನ ಪತ್ನಿಯನ್ನು ಬಿಟ್ಟು ಹೋಗಿದ್ದಾನೆ. ಕೆಲವು ತಿಂಗಳ ನಂತರ ಸಂತ್ರಸ್ತ ಯುವತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.