Publish Date: Sat, 15 Oct 2022 (09:24 IST)
Updated Date: Sat, 15 Oct 2022 (09:27 IST)
ಲಕ್ನೋ : ವ್ಯಕ್ತಿಯೊಬ್ಬ ಮಗಳ ಮೇಲಿನ ಕೋಪಕ್ಕೆ ಪತ್ನಿಯನ್ನು ಕೊಲೆಗೈದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ಆರೋಪಿಯನ್ನು ಶದಾಬ್ (35) ಎಂದು ಗುರುತಿಸಲಾಗಿದೆ. ಈತ ಮಗಳು ತನಗೆ ಬೆಡ್ಶೀಟ್ ತರಲಿಲ್ಲವೆಂದು ಸಿಟ್ಟುಗೊಂಡು ತನ್ನ ಪತ್ನಿಯನ್ನೇ ಕೊಲೆಗೈದಿದ್ದಾನೆ.
ಮಗಳ ಮೇಲೆ ಸಿಟ್ಟುಗೊಂಡಿದ್ದ ಶದಾಬ್ ಪತ್ನಿಗೆ ಚೂರಿಯಿಂದ ಇರಿದಿದ್ದಾನೆ. ಬುಧವಾರ ರಾತ್ರಿ ತನ್ನ 5 ವರ್ಷದ ಮಗಳ ಜೊತೆ ತನಗೆ ಬೆಡ್ ಶೀಟ್ ತಂದುಕೊಡುವಂತೆ ಶದಾಬ್ ಕೇಳಿದ್ದಾನೆ. ಆದರೆ ತನ್ನ ಪಾಡಿಗೆ ಆಟವಾಡುತ್ತಿದ್ದ ಪುಟ್ಟ ಕಂದಮ್ಮ ತನ್ನ ತಂದೆಗೆ ಬೆಡ್ ಶೀಟ್ ತಂದುಕೊಡುವ ಗೋಜಿಗೆ ಹೋಗಿಲ್ಲ.
ಈ ಹಿನ್ನೆಲೆಯಲ್ಲಿ ಮಗಳ ಮೇಲೆ ಸಿಟ್ಟುಗೊಂಡ ಶದಾಬ್, ಪತ್ನಿಯನ್ನು ಕರೆದು ಆಕೆಗೆ ಚೆನ್ನಾಗಿ ಥಳಿಸಿದ್ದಾನೆ. ಈ ವೇಳೆ ಪತಿಯ ಏಟಿನಿಂದ ತಪ್ಪಿಸಿಕೊಳ್ಳಲು ಪತ್ನಿ ಯತ್ನಿಸಿದ್ದಾಳೆ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ಆತ ಅಡುಗೆ ಮನೆಯಲ್ಲಿದ್ದ ಚಾಕು ತಂದು ಆಕೆಯ ದೇಹದ ಮೇಲೆಲ್ಲ ಇರಿದಿದ್ದಾನೆ.
ಘಟನೆಯಿಂದ ಗಂಭೀರ ಗಾಯಗೊಂಡ ಮಹಿಳೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯಿಸಿರೆಳೆದರು.