Select Your Language

Notifications

webdunia
webdunia
webdunia
webdunia

ಆರೋಪಿಯ ತೀರದ ಕಾಮದಾಹ: ಕೊನೆಗೂ ಪೊಲೀಸರ ಬಲೆಗೆ ಬಿದ್ದ ಭೂಪ

Accused
lucknow , ಬುಧವಾರ, 6 ಡಿಸೆಂಬರ್ 2023 (12:33 IST)
ಅವನು ನನಗೆ ಆಂಟಿ ಎಂದು ಕರೆಯುತ್ತಿದ್ದವನು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ. ಇದು ಬಹಿರಂಗವಾದರೆ ಕುಟುಂಬಕ್ಕೆ ಅವಮಾನವಾಗುತ್ತದೆಂದು ನನ್ನ ಪತಿ ಅತ್ಯಾಚಾರದ ವಿಷಯ ಮುಚ್ಚಿಟ್ಟರು ಮತ್ತು ಮನೆಯಿಂದ ಹೊರಗೆ ಹೋಗುವುದನ್ನೇ ತಡೆದರು ಎಂದು ಮಹಿಳೆ ಹೇಳಿದ್ದಾರೆ. ಇದೀಗ ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
 
ಆ ಮಹಿಳೆಗೆ 46 ವರ್ಷಗಳಾಗಿತ್ತು ಮತ್ತು ಹಣಕಾಸು ಎಕ್ಸಿಕ್ಯೂಟಿವ್  ಶಿವಕುಮಾರ್   ಆ ಮಹಿಳೆಯನ್ನು ಆಂಟಿ ಎಂದು ಕರೆಯುತ್ತಿದ್ದ. ಆದರೆ ಶಿವಕುಮಾರ್ ಕಾಮಪಿಪಾಸೆಗೆ ಆ ಮಹಿಳೆಯೂ ಬಲಿಯಾಗಿದ್ದಳು. ರಾಮನಗರ ಗ್ರಾಮದ ಖಾಲಿ ಮನೆಯೊಂದಕ್ಕೆ ಮಹಿಳೆಯನ್ನು ಎಳೆದುಕೊಂಡು ಹೋಗಿ ಅಮಾನುಷವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಅವನು ನಮ್ಮ ಬೀದಿಯಲ್ಲೇ ವಾಸವಾಗಿದ್ದ ಎಂದು ತನ್ನ ದುಃಸ್ವಪ್ನವನ್ನು ಮಹಿಳೆ ಬಿಚ್ಚಿಡುತ್ತಾ ಹೇಳಿದರು.
 
ಆದರೆ ರೇಪ್ ನಡೆದಿದ್ದರೂ ಮುಚ್ಚಿಟ್ಟಿದ್ದು ಇವರೊಬ್ಬರೇ ಅಲ್ಲ. ಗ್ರಾಮದ ಇನ್ನಿಬ್ಬರು ಮಹಿಳೆಯರು ಯಾದವ್‌ನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಭಯಾನಕ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಯಾದವ್ ರೇಪ್ ಮಾಡಿದ ಇನ್ನೊಬ್ಬ ಮಹಿಳೆ ಸಾಮಾಜಿಕ ಕಳಂಕಕ್ಕೆ ಬೇಸತ್ತು ರಾಮನಗರವನ್ನೇ ತ್ಯಜಿಸಿ ಹೋಗಿದ್ದಳು.
 
ಇಲ್ಲಿವರೆಗೆ ಯಾದವ್ ವಿರುದ್ಧ 6 ಮಹಿಳೆಯರು ರೇಪ್ ಆರೋಪ ಹೊರಿಸಿದ್ದಾರೆ. ಇವರ ಪೈಕಿ ಗುರಗಾಂವ್ ಬಾರ್ ನರ್ತಕಿ ಮೇಲೆ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಯಾದವ್ 7 ತಿಂಗಳು ಜೈಲು ವಾಸ ಅನುಭವಿಸಿದ್ದ. ಅವನ ಮೇಲೆ ದೂರು ನೀಡಿದ್ದಕ್ಕೆ ನನಗೆ ಸಂತೋಷವಾಯಿತು. ಆದರೆ ನೆರೆಮನೆಯವರು ನನ್ನನ್ನು ನಡತೆಗೆಟ್ಟವಳು ಎಂದು ನಿಂದಿಸಿದ್ದಾಗಿ  ನರ್ತಕಿ ನೆನಪಿಸಿಕೊಂಡಳು.

Share this Story:

Follow Webdunia kannada

ಮುಂದಿನ ಸುದ್ದಿ

ಪುತ್ರಿಯ ಮೇಲೆ ರೇಪ್ ಎಸಗಿ ಬ್ಲ್ಯಾಕ್‌ಮೇಲ್: ತಾಯಿ ಮಾಡಿದ್ದೇನು ಗೊತ್ತಾ?