Publish Date: Mon, 30 Nov 2020 (11:03 IST)
Updated Date: Mon, 30 Nov 2020 (11:05 IST)
ರಾಜಸ್ಥಾನ : ರಾಜಸ್ಥಾನದ ಯುವಕನೊಬ್ಬನನ್ನು ಕ್ರೂರವಾಗಿ ಥಳಿಸಿದ ಜನಸಮೂಹ ಮಾನವ ಕಸವನ್ನು ಸೇವಿಸುವಂತೆ ಒತ್ತಾಯಿಸಿದ ಘಟನೆ ರಾಜಸ್ಥಾನದ ಬೇಸಿಡಿ ಪ್ರದೇಶದಲ್ಲಿ ನಡೆದಿದೆ.
ಯುವಕ ಬಾಲಕಿಯೊಬ್ಬಳಿಗೆ ಕೀಟಲೆ ಮಾಡಿದ್ದಾನೆ. ಈ ಬಗ್ಗೆ ಬಾಲಕಿ ಕುಟುಂಬ ಆರೋಪ ಮಾಡಿದ ಕಾರಣ ಗ್ರಾಮಸ್ಥರು ಆರೋಪಿ ಯುವಕನನ್ನು ಹಿಡಿದು ಥಳಿಸಿ ಆತನಿಗೆ ಮಾನವ ಕಸವನ್ನು ತಿನ್ನಲು ಒತ್ತಾಯಿಸಿದ್ದಾರೆ. ಈ ದೃಶ್ಯವನ್ನು ಕೆಲವರು ಚಿತ್ರೀಕರಿಸಿದ ಹಿನ್ನಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.