Select Your Language

Notifications

webdunia
webdunia
webdunia
webdunia

ಊಟದಲ್ಲಿ ಉಪ್ಪು ಹೆಚ್ಚಾಯಿತೆಂದು ಎದೆಗೆ ಶೂಟ್ ಮಾಡ್ಕೊಂಡ ಯುವಕ!

ಊಟದಲ್ಲಿ ಉಪ್ಪು ಹೆಚ್ಚಾಯಿತೆಂದು ಎದೆಗೆ ಶೂಟ್ ಮಾಡ್ಕೊಂಡ ಯುವಕ!
ಲಕ್ನೋ , ಮಂಗಳವಾರ, 2 ಮೇ 2023 (10:59 IST)
ಲಕ್ನೋ : ಆಹಾರದಲ್ಲಿ ಉಪ್ಪಿನ ಅಂಶ ಹೆಚ್ಚಾಯಿತೆಂದು ಸಿಟ್ಟಿಗೆದ್ದ ಯುವಕನೊಬ್ಬ ತನ್ನನ್ನು ನಾನು ಶೂಟ್ ಮಾಡಿಕೊಂಡ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಸಾಂಬಾರ್ ನಲ್ಲಿ ಉಪ್ಪು ಹೆಚ್ಚಾಯಿತೆಂದು 22 ವರ್ಷದ ಪುರನ್ ಶಂಕರ್ ದುಬೇ ಶನಿವಾರ ರಾತ್ರಿ ತನ್ನ ಮನೆಯವರೊಂದಿಗೆ ಗಲಾಟೆ ಮಾಡಿದ್ದಾನೆ. ಗಲಾಟೆ ತಾರಕಕ್ಕೇರಿ ಆತ ಗನ್ ನಿಂದ ತನಗೆ ತಾನೇ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ.

ಪುರನ್ ಪೈಲ್ಸ್ ನಿಂದ ಬಳಲುತ್ತಿದ್ದನು. ಹೀಗಾಗಿ ಆತ ಅತಿಯಾಗಿ ಉಪ್ಪು ಹಾಗೂ ಖಾರವನ್ನು ಸೇವಿಸುತ್ತಿರಲಿಲ್ಲ. ಶನಿವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದು ಊಟ ಮಾಡಲು ಕುಳಿತಿದ್ದಾನೆ. ಈ ವೇಳೆ ಊಟದಲ್ಲಿ ಉಪ್ಪಿನ ಅಂಶ ಹೆಚ್ಚಿರುವುದು ಗೊತ್ತಾಗಿದೆ.

ಕೂಡಲೇ ಊಟ ಚೆಲ್ಲಿ ಮನೆಯವರೊಂದಿಗೆ ಜಗಳವಾಡಿದ್ದಾನೆ. ಇತ್ತ ಮನೆಯವರು ಸುಳ್ಳು ಹೇಳುತ್ತಿದ್ದೀಯಾ ಎಂದು ಪುರನ್ ಜೊತೆ ಜಗಳಕ್ಕಿಳಿದಿದ್ದರಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಪತನ !