Select Your Language

Notifications

webdunia
webdunia
webdunia
webdunia

ವೆಡ್ಡಿಂಗ್​ ಫೋಟೋ ಶೂಟ್​ನಲ್ಲಿ ಕೋತಿ!

Monkey in the wedding photo shoot
bangalore , ಬುಧವಾರ, 28 ಡಿಸೆಂಬರ್ 2022 (16:32 IST)
ಮದುವೆ ಅನೇಕರಿಗೆ ಜೀವನದ ಅತ್ಯಂತ ಸಂತೋಷದಾಯಕ ಮತ್ತು ಮರೆಯಲಾಗದ ಕ್ಷಣಗಳಲ್ಲಿ ಒಂದಾಗಿರುತ್ತದೆ. ಒಂದು ಕಾಲದಲ್ಲಿ ಮದುವೆಯ ದಿನವೇ ಗಂಡು ಹೆಣ್ಣು ಕಲ್ಯಾಣ ಮಂಟಪದಲ್ಲಿ ಮುಖ ನೋಡಿಕೊಳ್ಳುತ್ತಾ ಇದ್ದರು. ಇದೀಗ ಪ್ರೀ ವೆಡ್ಡಿಂಗ್​ ಹೆಸ್ರಲ್ಲಿ ಒಂದು ಸಿನಿಮಾ, ಆಲ್ಬಮ್​ ಸಾಂಗ್​ನೇ ಮಾಡಿ ಬಿಡ್ತಾರೆ. ವೆಡ್ಡಿಂಗ್ ಫೋಟೋಶೂಟ್, ಅದಕ್ಕಾಗಿಯೇ ಬೇರೆ ಬೇರೆ ಜಾಗಗಳಿಗೆ ಹೋಗುತ್ತಾರೆ. ಫೋಟೋ ಶೂಟ್ ಸಮಯದಲ್ಲಿ ಕೆಲವು ಆಸಕ್ತಿದಾಯಕ ಘಟನೆಗಳು ಸಹ ನಡೆಯುತ್ತವೆ. ಇಂತಹದೇ ಘಟನೆ ಇಲ್ಲಿಯೂ ನಡೆದಿದೆ.  ಪಾರ್ಕ್‌ನಲ್ಲಿ ಯುವ ಜೋಡಿಯ ಫೋಟೋ ಶೂಟ್ ನಡೆಯುತ್ತಿತ್ತು. ಅಲ್ಲೇ ಮರದ ಮೇಲೆ ಇದ್ದ ಮಂಗ ದಿಢೀರನೆ ಎಂಟ್ರಿ ಕೊಟ್ಟಿದೆ. ವರನ ಸೊಂಟದ ಮೇಲೆ ಕೋತಿ ಫೋಟೋಗೆ ಪೋಸ್ ನೀಡಲಾರಂಭಿಸಿದೆ. ಈ ವಿಡಿಯೋ ಈಗ ಸಖತ್​​ ವೈರಲ್​​​ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯೂಯಾರ್ಕ್ ಹಿಮಪಾತಕ್ಕೆ 60 ಮಂದಿ ಬಲಿ