ಬಿಹಾರ್ :ಬಂಕಾ ಜಿಲ್ಲೆಯ ಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ನೀತು ಕುಮಾರಿ ಎಂಬ ಶಿಕ್ಷಕಿ ಶಾಲೆಯಲ್ಲಿದ್ದಾಗ ಈಕೆಯ ಪರ್ಸ್ ನಲ್ಲಿದ್ದ 35 ರೂ. ಹಣ ಕಾಣೆಯಾಗಿತ್ತು. ಮಕ್ಕಳ ಮೇಲೆ ಅನುಮಾನಗೊಂಡ ಶಿಕ್ಷಕಿ ಎಲ್ಲರನ್ನೂ ದೇವಸ್ಥಾನಕ್ಕೆ ಕರೆದೊಯ್ದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುವಂತೆ ಒತ್ತಾಯಿಸಿದ್ದರು. 35 ರೂಪಾಯಿ ಕಳುವಾಗಿದೆ ಎಂದು ಶಿಕ್ಷಕಿಯೊಬ್ಬರು ತರಗತಿಯ ಎಲ್ಲ ಮಕ್ಕಳನ್ನೂ ದೇವಸ್ಥಾನಕ್ಕೆ ಕರೆದೊಯ್ದು ಪ್ರಮಾಣ ಮಾಡಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಈ ಘಟನೆ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಶಿಕ್ಷಕಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಸರ್ಕಾರ ಶಿಕ್ಷಕಿಯನ್ನು ವರ್ಗಾವಣೆ ಮಾಡಿದೆ. 122 ವಿದ್ಯಾರ್ಥಿಗಳಿರುವ ಈ ಶಾಲೆಗೆ ನೀತುಕುಮಾರಿ ಸೇರಿದಂತೆ ಕೇವಲ ಇಬ್ಬರು ಶಿಕ್ಷಕರು ಮಾತ್ರ ನಿಯೋಜಿತರಾಗಿದ್ದರು.