ಪೋಷಕರೇ ನನ್ನನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ಪಾಲ್ಗೊಳ್ಳಲು ಒತ್ತಡ ಹೇರಿದ್ದರು ಎಂದು ನೊಂದ ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಆರೋಪಿಗಳ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಐಪಿಸಿಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದ್ದು , ಅನೈತಿಕ ಸಾಗಾಣಿಕೆ ಕಾಯಿದೆ ಮತ್ತು ಮಕ್ಕಳ ರಕ್ಷಣೆಯ ಲೈಂಗಿಕ ಅಪರಾಧಗಳ (POCSO) ಕಾಯಿದೆಯಡಿ ಮೂವರು ಆರೋಪಿಗಳ ಮೇಲೆ ಆರೋಪ ದಾಖಲಿಸಲಾಗಿದೆ.
ಹಣದ ಲಾಲಸೆಗೊಳಗಾಗಿ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಕೆಯ ತಾಯಿ, ಅಕ್ಕ ಮತ್ತು ಭಾವನೇ ವೇಶ್ಯಾವಾಟಿಕೆಗೆ ತಳ್ಳಲೆತ್ನಿಸಿದ ಹೇಯ ಘಟನೆ ಬಿಹಾರ್‌ನಲ್ಲಿ ವರದಿಯಾಗಿದೆ.
ಅವರ ಈ ದುರುದ್ದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಬಾಲಕಿ ಯಕಟಪುರದಲ್ಲಿನ ತನ್ನ ನಿವಾಸದಿಂದ ತಪ್ಪಿಸಿಕೊಂಡು, ಸಿವಿಲ್ ಲಿಬರ್ಟೀಸ್ ಪೀಪಲ್ಸ್ ಯೂನಿಯನ್ ಎಂಬ ಸ್ವಯಂಸೇವಾ ಸಂಸ್ಥೆಯ ಸಹಾಯದೊಂದಿಗೆ ಪೋಲಿಸರಿಗೆ ದೂರು ನೀಡಿದ್ದಾಳೆ ಎಂದು ಪೋಲಿಸ್ ಅಧಿಕಾರಿ ತಿಳಿಸಿದ್ದಾರೆ.
ಪರಾರಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ತಾಯಿ,ಅಕ್ಕ, ಭಾವ ನನ್ನನ್ನು ವೇಶ್ಯಾವಾಟಿಕೆ ಮಾಡುವಂತೆ ಒತ್ತಡ ಹೇರಿದರು ಮತ್ತು ನನ್ನನ್ನು ಗೋವಾ, ಪುಣಾ, ಮುಂಬೈ ಮತ್ತು ಹೈದರಾಬಾದಿನ ಅನೇಕ ಕಡೆಗಳಿಗೆ ಕಳುಹಿಸಿದರು. ಅಲ್ಲದೇ ನನ್ನ ಮೇಲೆ ಹಲ್ಲೆ ಕೂಡ ನಡೆಸಿದರು ಎಂದು ಪೀಡಿತ ಬಾಲಕಿ ನೋವು ತೋಡಿಕೊಂಡಿದ್ದಾಳೆ.