Webdunia - Bharat's app for daily news and videos

Install App

ಜೂಜಿನಲ್ಲಿ ಪತ್ನಿಯನ್ನೇ ಪಣಕ್ಕಿಟ್ಟ ಹಣದಾಹಿ ಮುಸ್ಲಿಂ ವ್ಯಕ್ತಿ

Webdunia
ಶನಿವಾರ, 16 ಡಿಸೆಂಬರ್ 2023 (13:13 IST)
ಜೈಪುರದ ಮುಸ್ಲಿಂ ಮಹಿಳೆಯೋರ್ವಳ ಕರುಣಾಜನಕ ಕಥೆ ಇದು. ತನ್ನ ಗೆಳೆಯನ ಜತೆ ಬೆಟ್ ಕಟ್ಟಿ ಆಕೆಯನ್ನು ಸೋತ ಪತಿ, ಗೆಳೆಯನ ಜತೆ ಪತ್ನಿಯನ್ನು ಮಲಗಿಸಿ ನಿಖಾ ಹಲಾಲ್ ನೆಪ ಒಡ್ಡಿದ್ದಾನೆ. ಇದೀಗ ಪತ್ನಿ ಪತಿಯ ವಿರುದ್ಧ ಕೇಸ್ ದಾಖಲಿಸಿದ್ದರಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ದೇಶದಾದ್ಯಂತ ಏಕರೂಪ ನಾಗರಿಕ ನೀತಿಸಂಹಿತೆ ಕುರಿತಂತೆ ಚರ್ಚೆ ನಡೆಸುತ್ತಿರುವ ಮಧ್ಯೆ, ಇದನ್ನು ಬೆಂಬಲಿಸುವವರ ವಾದಕ್ಕೆ ಪುಷ್ಠಿ ನೀಡುವ ಘಟನೆಯೊಂದು ಕಾನ್ಪುರದಲ್ಲಿ ನಡೆದಿದೆ. ಬೆಟ್‌ನಲ್ಲಿ ಪತ್ನಿಯನ್ನು ಪಣಕ್ಕಿಟ್ಟ ಮುಸ್ಲಿಂ ವ್ಯಕ್ತಿಯೊಬ್ಬ ಆಕೆಯನ್ನು ಸೋತ ಬಳಿಕ  ಮಾಡಿದ್ದೇನು? ಅಮಾಯಕ ಮಹಿಳೆಯ ದಯನೀಯ ಕಥೆಯನ್ನು ನೀವೇ ಓದಿ. 
 
ಮತ್ತೀಗ  ಪೀಡಿತ ಮಹಿಳೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮಾಡಿಸಿದ ಆರೋಪವನ್ನು ಹೊರಿಸಿ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ನಿಖಾ ಹಲಾಲ್ ಎಂದರೆ ವಿಚ್ಛೇದನದ ಬಳಿಕ ಮಹಿಳೆ ಪತಿ ಬಳಿ ಮರಳಿ ಹೋಗಬೇಕೆಂದರೆ ಬೇರೊಬ್ಬನ ಜತೆ ಮದುವೆಯಾಗಬೇಕು.
 
ಪತಿ ತನ್ನ ಸ್ನೇಹಿತನಿಂದ ನನ್ನ ಮೇಲೆ ಅತ್ಯಾಚಾರ ಮಾಡಿಸಿದ. ನನ್ನ ಪತಿಯ ಈ ದುರ್ವರ್ತನೆ ನನ್ನಿಂದ ಸಹಿಸಲಾಗುತ್ತಿಲ್ಲ. ಈ ಘಟನೆಯಿಂದ ನಾನು ಹತಾಶಳು, ಭಯಗ್ರಸ್ತಳು ಮತ್ತು ಆಕ್ರೋಶಭರಿತಳಾಗಿದ್ದೇನೆ ಎಂದಾಕೆ ಹೇಳಿದ್ದಾಳೆ. 
 
ಪ್ರೊಪರ್ಟಿ ಡೀಲರ್ ಆಗಿರುವ ಆಕೆಯ ಪತಿ ಹಲಾಲ್ ನೆಪ ಮುಂದಿಟ್ಟುಕೊಂಡು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ. 
 
ಕಳೆದ 25 ವರ್ಷಗಳ ಹಿಂದೆ ನಮ್ಮಿಬ್ಬರ ಮದುವೆಯಾಗಿತ್ತು. 8 ತಿಂಗಳ ಹಿಂದೆ ನಮ್ಮಿಬ್ಬರಿಗೆ ವಿಚ್ಛೇದನವಾಗಿತ್ತು. ನಮಗೆ ಇಬ್ಬರು ಬೆಳೆದ ಗಂಡು ಮಕ್ಕಳಿದ್ದಾರೆ. ಸದಾ ತನ್ನ ಗೆಳೆಯರೊಂದಿಗೆ ಮಲಗೆಂದು ಪತಿ ಒತ್ತಾಯಿಸುತ್ತಿದ್ದ. ಆದರೆ ನಾನದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದೆ. ಇದರಿಂದ ಸಿಟ್ಟಿಗೆದ್ದ ಆತ ಒಂದು ದಿನ ಟ್ರಿಪಲ್ ತಲಾಕ್ ಎಂದು ಬಿಟ್ಟ. ಆದರೆ ನನ್ನ ಜತೆ ವಾಸಿಸುವುದನ್ನು ಮುಂದುವರೆಸಿದ ಆತ ದೈಹಿಕ ಸಂಬಂಧವನ್ನು ಸಹ ಮುಂದುವರೆಸಿದ್ದ. ಮತ್ಯಾಕೆ ಹಲಾಲ್ ಅವಶ್ಯಕತೆ ಎಂದಾಕೆ ಪ್ರಶ್ನಿಸಿದ್ದಾಳೆ. 
 
ಲಾಂಗ್ ಡ್ರೈವ್ ನೆಪದಲ್ಲಿ ತನ್ನ ಸ್ನೇಹಿತನ ಮನೆಗೆ ಕರೆದೊಯ್ದ . ಆಗ ನನಗೆ ಆರೋಗ್ಯ ಸರಿಯಾಗಿರಲಿಲ್ಲ. ಹೀಗಾಗಿ ಪತಿ ಕೆಲವೊಂದು ಗುಳಿಗೆಗಳನ್ನು ನೀಡಿದ. ಅದನ್ನು ತಿಂದ ಬಳಿಕ ನನಗೇನು ಗೊತ್ತಾಗಲಿಲ್ಲ. ಮತ್ತೆ ಎಚ್ಚರವಾದಾಗ ನಾನು ಆತನ ಸ್ನೇಹಿತನ ಪಕ್ಕದಲ್ಲಿ ನಗ್ನವಾಗಿದ್ದೆ ಎಂದು 42 ವರ್ಷದ ಮಹಿಳೆ ಪೊಲೀಸರಲ್ಲಿ ತನಗಾದ ಅನ್ಯಾಯವನ್ನು ಬಿಚ್ಚಿಟ್ಟಿದ್ದಾಳೆ.
 
ಸಹಾಯಕ್ಕಾಗಿ ಕೂಗಿಕೊಂಡಾಗ ಕೋಣೆಯೊಳಗೆ ಬಂದ ಪತಿ ಕೂಗಿಕೊಂಡರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. 
 
ಘಟನೆಯಿಂದ ಬೆಚ್ಚಿ ಬಿದ್ದಿರುವ ಮಹಿಳೆ ಈಗ ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ದುಷ್ಕೃತ್ಯವನ್ನು ಪತಿ ವಿಡಿಯೋ ಸಹ ಮಾಡಿಕೊಂಡಿದ್ದಾಗಿ  ಹೇಳಿದ್ದಾಳೆ. ನನಗೆ ಆತನ ಗೆಳೆಯನ ಜತೆ ಮದುವೆಯಾಗಿರಲಿಲ್ಲ, ಹೀಗಾಗಿ ಇದು ಅತ್ಯಾಚಾರವೆನಿಸುತ್ತದೆ ಎಂದಾಕೆ ಕಿಡಿಕಾರಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆನೆ ಜತೆ ಸೆಲ್ಪಿ ವಿಡಿಯೋ ವೈರಲ್, ಇನ್ಮುಂದೆ ಈ ಥರ ಮಾಡುವವರ ವಿರುದ್ಧ ಕ್ರಮಕ್ಕೆ ಈಶ್ವರ್ ಖಂಡ್ರೆ ಸೂಚನೆ

ಪಾಕ್ ವಿರುದ್ಧ ಅದು ಸರಿಯಾದ ಪ್ರತೀಕಾರ: ಆಪರೇಷನ್ ಸಿಂಧೂರ್‌ನ್ನು ಶ್ಲಾಘಿಸಿದ ಜಪಾನಿನ ಕಾರ್ಯತಂತ್ರ ತಜ್ಞ

IPL 2025: ಅನುಚಿತ ವರ್ತನೆಗೆ ಡೆಲ್ಲಿ ವೇಗದ ಬೌಲರ್‌ ಮುಕೇಶ್‌ ಕುಮಾರ್‌ಗೆ ಬಿತ್ತು ದಂಡ

ಜಮ್ಮು ಕಾಶ್ಮೀರದ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಯೋಧ ಹುತಾತ್ಮ

ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ: ಡಿಸಿಎಂ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments