Publish Date: Thu, 14 Dec 2023 (10:52 IST)
Updated Date: Thu, 14 Dec 2023 (10:53 IST)
ಆರೋಪಿ ಪತಿ ಮಟನ್ ತಂದು ಚೆನ್ನಾಗಿ ಕರ್ರಿ ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಮಟನ್ ಕರ್ರಿ ತಿಂದ ನಂತರ ಚೆನ್ನಾಗಿ ಬೇಯಿಸಿಲ್ಲ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಕೋಪದ ಭರದಲ್ಲಿ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಪತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪತ್ನಿ ಮಟನ್ ಕರ್ರಿ ಸರಿಯಾಗಿ ಬೇಯಿಸಿಲ್ಲ ಎನ್ನುವ ಕಾರಣಕ್ಕೆ ಕುಡುಕ ಪತಿಮಹಾಶಯನೊಬ್ಬ ಆಕೆಗೆ ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿದ ಘಟನೆ ವರದಿಯಾಗಿದೆ.
ಮೈಲಾರ್‌ದೇವ್‌ಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಟೇದಾನ್ ಪ್ರದೇಶದ ವಾಸಿಯಾಗಿರುವ ಕಾರ್ಮಿಕನಾದ ಶಂಕರ್ ರಾವ್, ಮನೆಗೆಲಸದವಳಾಗಿ ಕಾರ್ಯನಿರ್ವಹಿಸುತ್ತಿರುವ 40 ವರ್ಷ ವಯಸ್ಸಿನ ಪತ್ನಿ ಸುಲೋಚನಾ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯಲ್ಲಿದ್ದ ಸುಲೋಚನಾ ತಾಯಿ ಮತ್ತು ಪುತ್ರಿ ಕೂಡಲೇ ಮನೆಯಿಂದ ಹೊರಗೆ ಧಾವಿಸಿ ನೆರಹೊರೆಯವರ ಸಹಾಯ ಬೇಡಿದ್ದಾರೆ. ಕೂಡಲೇ ಜನರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿಯಿಂದ ಗಾಯಗೊಂಡ ಮಹಿಳೆ ಸುಲೋಚನಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಲೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತೈ ಮತ್ತು ದೈಹಿಕ ಹಲ್ಲೆ ಆರೋಪಗಳ ಹಿನ್ನೆಲೆಯಲ್ಲಿ ಪೊಲೀಸರು ಕುಡುಕ ಪತಿಯನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.