Select Your Language

Notifications

webdunia
webdunia
webdunia
webdunia

ಪತ್ನಿಯಿಂದ ವಿಚ್ಛೇದನ ಪಡೆಯುವ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಬಯಕೆಗೆ ಬ್ರೇಕ್ ಹಾಕಿದ ಕೋರ್ಟ್

ಪತ್ನಿಯಿಂದ ವಿಚ್ಛೇದನ ಪಡೆಯುವ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಬಯಕೆಗೆ ಬ್ರೇಕ್ ಹಾಕಿದ ಕೋರ್ಟ್
ಜಮ್ಮು&ಕಾಶ್ಮೀರ , ಮಂಗಳವಾರ, 12 ಡಿಸೆಂಬರ್ 2023 (12:44 IST)
File photo
ಜಮ್ಮು&ಕಾಶ್ಮೀರ: ಆರ್ಟಿಕಲ್ 370 ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಗೆ ವಿರುದ್ಧವಾಗಿ ತೀರ್ಪು ಬಂದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾಗೆ ಮತ್ತೊಂದು ಹಿನ್ನಡೆಯಾಗಿದೆ.

ಆರ್ಟಿಕಲ್ 370 ರದ್ದತಿ ಪ್ರಶ್ನಿಸಿದವರಲ್ಲಿ ಒಮರ್ ಅಬ್ದುಲ್ಲಾ ಕೂಡಾ ಒಬ್ಬರು. ಇದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಕೇಂದ್ರದ ನಿರ್ಧಾರ ಸರಿ ಎಂದು ಐತಿಹಾಸಿಕ ತೀರ್ಪು ಪ್ರಕಟಿಸಿತ್ತು.

ಅದರ ಬೆನ್ನಲ್ಲೇ ಈಗ ಒಮರ್ ಅಬ್ದುಲ್ಲಾ ತಮ್ಮ ಪತ್ನಿಯಿಂದ ವಿಚ್ಛೇದನ ಬಯಸಿ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿದೆ. ಪತ್ನಿ ಪಾಯಲ್ ಅಬ್ದುಲ್ಲಾರಿಂದ ವಿಚ್ಛೇದನ ಕೋರಿ ಒಮರ್ ಕೋರ್ಟ್ ಮೊರೆ ಹೋಗಿದ್ದರು.

ಆದರೆ ಅವರು ಅರ್ಜಿಯಲ್ಲಿ ಮಾಡಿರುವ ಆರೋಪಗಳಿಗೆ ಯಾವುದೇ ಸ್ಪಷ್ಟತೆಯಿಲ್ಲ. ವೈವಾಹಿಕ ಕ್ರೌರ್ಯ ನಡೆದಿದೆಯೆಂಬುದಕ್ಕೆ ಪುರಾವೆ ಇಲ್ಲ ಎಂಬ ಕಾರಣ ನೀಡಿ ದೆಹಲಿ ಹೈಕೋರ್ಟ್ ಅವರ ವಿಚ್ಛೇದನ ಅರ್ಜಿಯನ್ನು ತಳ್ಳಿ ಹಾಕಿದೆ. 2016 ರಲ್ಲಿಯೇ ಕೆಳ ಹಂತದ ಕೋರ್ಟ್ ಇದೇ ಕಾರಣಕ್ಕೆ ಒಮರ್ ಅರ್ಜಿ ತಳ್ಳಿ ಹಾಕಿತ್ತು. ಬಳಿಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿಯೂ ಅವರಿಗೆ ಹಿನ್ನಡೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನದ ತಟ್ಟೆಯಲ್ಲಿಯೇ ನಮ್ಮ ಭೋಜನ ಎಂದ ಯಶೋಧರಾ ಸಿಂಧಿಯಾ