Webdunia - Bharat's app for daily news and videos

Install App

ಸಾಲವಸೂಲಿ ನೆಪದಲ್ಲಿ ಮಹಿಳೆಗೆ ಕಿರುಕುಳ: ವ್ಯಕ್ತಿಗೆ ಥಳಿಸಿದ ಸಾರ್ವಜನಿಕರು

Webdunia
ಶನಿವಾರ, 16 ಡಿಸೆಂಬರ್ 2023 (09:39 IST)
ಜಿಲ್ಲೆಯಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಫಟಿಂಗನೊಬ್ಬ, ಸಾಲದ ’ಬಡ್ಡಿ’ ವಜಾ ಆಗಬೇಕು ಅಂದ್ರೆ ನನ್ನ ಜೊತೆ ಸೆಕ್ಸ್ ಮಾಡು ಎಂದು ಬೆದರಿಕೆ ಒಡ್ಡುತ್ತಿದ್ದ. ಇದರಿಂದ ಸಾಲ ನೀಡಿದವನ ಲೈಂಗಿಕ ಕಿರುಕುಳದಿಂದ ಬೇಸತ್ತ ಯುವತಿಗೆ ಮಾನಸಿಕವಾಗಿ ಕುಗಿ ಹೋಗಿದ್ದಳು. ಆದ್ರೆ ನೆನ್ನೆ ಸೆಕ್ಸ್ ಸಾಲಗಾರನಿಗೆ ಜನರೇ ಹಿಡಿದು ಥಳಿಸಿ ಬಡ್ಡಿ ವಜಾ ಮಾಡಿದ್ದಾರೆ..!
 
ಸಾಲವಸೂಲಿ ನೆಪದಲ್ಲಿ ಮನೆಗೆ ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ  ನಡೆದಿದೆ.
 
ಶೇಖರಪ್ಪ ನಗರದ ನಿವಾಸಿ ರೇಣುಕ (ಹೆಸರು ಬದಲಿಸಲಾಗಿದೆ) ಎಂಬುವವರಿಗೆ ಕೃಷ್ಣಮೂರ್ತಿ ಎಂಬ ವ್ಯಕ್ತಿ 16 ಸಾವಿರ ರುಪಾಯಿಗಳ ಸಾಲವನ್ನು ನೀಡಿದ್ದ. ಆ ಸಾಲದ ಹಣದ ಮೂಲಕ ಪುಟ್ಟ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಈ ಮಹಿಳೆಯ ಮನೆಗೆ ಸಾಲದ ಬಡ್ಡಿ ಮತ್ತು ಅಸಲು ತೀರಿಸುವಲ್ಲಿ ಸ್ವಲ್ಪ ಕಷ್ಟವಾಗತೊಡಗಿತು. ಇದನ್ನೇ ಸೆಕ್ಸ್ ಬಂಡವಾಳ ಮಾಡಿಕೊಂಡ ಕೃಷ್ಣಮೂರ್ತಿಯು, ಸಾಲ ವಸೂಲಾತಿ ನೆಪದಲ್ಲಿ ಆಗಾಗ ಆಕೆಯ ಮನೆಗೆ ಬಂದು ಸೆಕ್ಸ್ ಮಾಡು.. ಬಡ್ಡಿ ತೀರಿ ಹೋಗುತ್ತೆ ಅಂತ ಬ್ಲಾಕ್ ಮೇಲ್ ಮಾಡ್ತಿದ್ದ.
 
ಅವನ ಬಲವಂತಕ್ಕೆ ಬೇಸತ್ತ ಮಹಿಳೆಯು ತನ್ನನ್ನು ಅವನಿಗೆ ಬಲವಂತವಾಗಿ ಒಪ್ಪಿಸಿಕೊಂಡಿದ್ದಾಳೆ. ಇಷ್ಟೇ ಆಗಿದ್ರೆ ಪ್ರಕರಣ ಹೊರಗೆ ಬರ‍್ತಾ ಇರಲಿಲ್ಲ. ಆ ಮಹಿಳೆಯ ನಗ್ನ ಚಿತ್ರಗಳನ್ನು ತೆಗೆದು ಬ್ಲಾಕ್'ಮೇಲ್ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆಯು ಕೃಷ್ಣಮೂರ್ತಿಯ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆಯ ಬಗ್ಗೆ ಅತ್ಮೀಯರಿಗೆ ಹೇಳಿಕೊಂಡಿದ್ದಾಳೆ. ಇದರಿಂದ ಆಕೆಯ ನೆರವಿಗೆ ಧಾವಿಸಿದ ಸ್ಥಳೀಯರು ಆರೋಪಿ ಕೃಷ್ಣಮೂರ್ತಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಗ್ರಾಮಾಂತರ ಠಾಣೆಗೆ ಒಪ್ಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Anant Ambani:ಮದುವೆ ಬೆನ್ನಲ್ಲೇ ಮಗನಿಗೆ ದೊಡ್ಡ ಜವಾಬ್ದಾರಿ ವಹಿಸಿದ ಮುಕೇಶ್‌, ನೀತಾ ಅಂಬಾನಿ

Pahalgam Terror Attack: ರಾಷ್ಟ್ರೀಯ ಭದ್ರತೆ ಹಿತದೃಷ್ಟಿಯಲ್ಲಿ ದೊಡ್ಡ ನಿರ್ಧಾರ ಕೈಗೊಂಡ ಕೇಂದ್ರ

Attari-Wagah border ಬಂದ್: ಪಾಕಿಸ್ತಾನ ಯುವತಿ, ರಾಜಸ್ಥಾನ ಯುವಕನ ಮದುವೆಗೆ ಅಡ್ಡಿ

Pahalgam terror Attack: ಪ್ರತ್ಯಕ್ಷದರ್ಶಿಗಳ ಸಾಕ್ಷಿ ಸಂಗ್ರಹಿಸುತ್ತಿರುವ NIA

ಭಯೋತ್ಪಾದಕರಿಗೂ, ಸಿದ್ದರಾಮಯ್ಯಗೂ ಯಾವುದೇ ವ್ಯತ್ಯಾಸವಿಲ್ಲ: ಅರವಿಂದ ಬೆಲ್ಲದ ಗರಂ

ಮುಂದಿನ ಸುದ್ದಿ