Select Your Language

Notifications

webdunia
webdunia
webdunia
webdunia

ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ, ತಪ್ಪಿದ ಅವಘಡ‌

ಏರ್ ಇಂಡಿಯಾ ಫ್ಲೈಟ್

Sampriya

ನವದೆಹಲಿ , ಶುಕ್ರವಾರ, 20 ಜೂನ್ 2025 (20:30 IST)
ನವದೆಹಲಿ: ದೆಹಲಿಯಿಂದ ಪುಣೆಗೆ 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ದ ಏರ್ ಇಂಡಿಯಾ ವಿಮಾನಗೆ ಹಕ್ಕಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.

AI-2469 ವಿಮಾನವು ದೆಹಲಿಯಿಂದ ಬೆಳಿಗ್ಗೆ 5:31 ಕ್ಕೆ ಹೊರಟಿತು ಮತ್ತು ಬೆಳಿಗ್ಗೆ 7:14 ಕ್ಕೆ ಪುಣೆಗೆ ಸುರಕ್ಷಿತವಾಗಿ ಇಳಿಯಿತು.

ಏರ್‌ಬಸ್ A320 ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪುಣೆಯಲ್ಲಿ ಟಚ್‌ಡೌನ್ ಮಾಡಿದ ನಂತರವೇ ಹಕ್ಕಿ ಹೊಡೆದಿರುವುದು ಪತ್ತೆಯಾಗಿದೆ ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.

ಇಂಜಿನಿಯರಿಂಗ್ ತಂಡದಿಂದ ವ್ಯಾಪಕ ತಪಾಸಣೆಗಾಗಿ ಈಗ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ.

"ಜೂನ್ 20 ರಂದು ಪುಣೆಯಿಂದ ದೆಹಲಿಗೆ ಕಾರ್ಯಾಚರಿಸಬೇಕಾಗಿದ್ದ AI2470 ವಿಮಾನವು ಪುಣೆಯಲ್ಲಿ ಸುರಕ್ಷಿತವಾಗಿ ಬಂದಿಳಿದ ನಂತರ ಪಕ್ಷಿಗಳ ಹೊಡೆತದಿಂದಾಗಿ ಅದನ್ನು ರದ್ದುಗೊಳಿಸಲಾಗಿದೆ" ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಸಿಕ್ಕಿಬಿದ್ದ ಪ್ರಯಾಣಿಕರಿಗೆ ವಸತಿ ಒದಗಿಸುವುದು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಗನ್ನಾಥನ ದರ್ಶನಕ್ಕಾಗಿ ಡೊನಾಲ್ಡ್‌ ಟ್ರಂಪ್ ಆಹ್ವಾನವನ್ನೇ ತಿರಸ್ಕರಿಸಿದೆ: ನರೇಂದ್ರ ಮೋದಿ