Publish Date: Wed, 18 Jun 2025 (20:50 IST)
Updated Date: Wed, 18 Jun 2025 (20:52 IST)
ಮುಂಬೈ: ಹವಾಮಾನ ವೈಪರೀತ್ಯ, ಕಾರ್ಯಾಚರಣೆ ಸಂಬಂಧಿತ ಸೇರಿದಂತೆ ಅನೇಕ ಕಾರಣದಿಂದಾಗಿ ಮಂಗಳವಾರ ಮತ್ತು ಬುಧವಾರ ಏರ್ ಇಂಡಿಯಾದ ಕೆಲ ವಿಮಾನಗಳ ಹಾರಾಟ ರದ್ದಾಗಿದೆ. ಇನ್ನೂ ಕೆಲ ವಿಮಾನಗಳು ಮಾರ್ಗ ಬದಲಿಸಿದ್ದವು.
ಕಾರ್ಯಾಚರಣೆ ಸಂಬಂಧಿತ ಕಾರಣಗಳಿಂದಾಗಿ ಮುಂಬೈ–ಲಖನೌ ವಿಮಾನದ ಸಂಚಾರವನ್ನು ಜೂನ್ 17ರಂದು ರದ್ದು ಮಾಡಲಾಗಿತ್ತು.
ಇನ್ನೂ ದೆಹಲಿಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕೆಲ ವಿಮಾನಗಳ ಹಾರಾಟದ ಮಾರ್ಗ ಕೂಡ ಬದಲಾವಣೆ ಮಾಡಲಾಗಿದೆ. ಅಲ್ಲದೆ ಪರ್ಯಾಯ ಮಾರ್ಗದಲ್ಲಿ ಸಾಗುವ ವಿಮಾನಗಳು ತಡವಾಗಿ ತಲುಪುತ್ತಿವೆ. ಲಖನೌಗೆ ವಿಮಾನ ಸಂಚಾರ ರದ್ದುಪಡಿಸಲು ಇವೆಲ್ಲ ಕಾರಣಗಳಾಗಿವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಇನ್ನೂ ವಿಮಾನ ರದ್ದಾಗಿರುವುದರಿಂದ ಪ್ರಯಾಣಿಕರಿಗೆ ಹೋಟೆಲ್ ಸೌಲಭ್ಯ ಒದಗಿಸಲಾಗಿದೆ. ಪ್ರಯಾಣ ರದ್ದು ಮಾಡಿದ ಪ್ರಯಾಣಿಕರಿಗೆ ಪೂರ್ಣ ಪ್ರಮಾಣದಲ್ಲಿ ಹಣ ಹಿಂದಿರುಗಿಸಲಾಗುವುದು ಎಂದು ಅದು ಹೇಳಿದೆ.
ಏರ್ ಇಂಡಿಯಾ ಸಂಸ್ಥೆಯು ಮಂಗಳವಾರ ಏಳು ಅಂತರರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರದ್ದು ಮಾಡಿತ್ತು. ಇದರೊಂದಿಗೆ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಪತನದ ಬಳಿಕ ಸಂಸ್ಥೆಯು ಸುಮಾರು 80 ವಿಮಾನಗಳ ಹಾರಾಟವನ್ನು ರದ್ದು ಮಾಡಿದಂತಾಗಿದೆ.