Publish Date: Wed, 14 Oct 2020 (10:35 IST)
Updated Date: Wed, 14 Oct 2020 (10:36 IST)
ಲಕ್ನೋ : 65 ವರ್ಷದ ದಲಿತ ವ್ಯಕ್ತಿಯ ಮೇಲೆ ಯುವಕನೊಬ್ಬ ಹಲ್ಲೆ ಮಾಡಿ ಮೂತ್ರ ಕುಡಿಯುವಂತೆ ಒತ್ತಾಯಿಸಿದ ಘಟನೆ ಉತ್ತರ ಪ್ರದೇಶದ ಲಲಿತಪುರದ ರೋಡಾದಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯ ಮಗನ ಮೇಲೆ ಆರೋಪಿ ಯುವಕ ಈ ಹಿಂದೆ ಕೊಡಲಿಯಿಂದ ಹಲ್ಲೆ ಮಾಡಿದ್ದ. ಈ ಹಿನ್ನಲೆಯಲ್ಲಿ ತಂದೆ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ. ಇದರಿಂದ ಕೋಪಗೊಂಡ ಆರೋಪಿ ಕೇಸ್ ವಾಪಾಸ್ ಪಡೆಯುವಂತೆ ಒತ್ತಾಯಿಸಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಮೂತ್ರ ಕುಡಿಯುವಂತೆ ಒತ್ತಾಯಿಸಿದ. ಅಲ್ಲದೇ ಇದನ್ನು ತಡೆಯಲು ಬಂದ ಆತನ ಮಗಳ ಮೇಲೂ ಕೋಲಿನಿಂದ ಹಲ್ಲೆ ಮಾಡಿದ್ದಾನೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರಪಿಯನ್ನು ಬಂಧಿಸಿ ವಿಚಾರಣೆ ನಡೆಸತ್ತಿದ್ದಾರೆ ಎನ್ನಲಾಗಿದೆ.