2ರ ಬಾಲಕಿ ನೆರೆಮನೆಯ ಬಾಗಿಲಿನಲ್ಲಿದ್ದ ಬ್ಯಾಗ್‍ನಲ್ಲಿ ಶವವಾಗಿ ಪತ್ತೆ!?

Webdunia
ಬುಧವಾರ, 12 ಏಪ್ರಿಲ್ 2023 (08:51 IST)
ಲಕ್ನೋ : 2 ದಿನಗಳಿಂದ ಕಾಣೆಯಾಗಿದ್ದ 2 ವರ್ಷದ ಬಾಲಕಿಯ ಶವವು ನೆರೆ ಮನೆಯ ಬಾಗಿಲಿಗೆ ನೇತು ಹಾಕಿದ್ದ ಬ್ಯಾಗ್ನಲ್ಲಿ ಪತ್ತೆಯಾದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

ಮಾನ್ಸಿ (2) ಮೃತ ಬಾಲಕಿ. ಮಾನ್ಸಿ, ಸಹೋದರ ಹಾಗೂ ತಂದೆ, ತಾಯಿಯೊಂದಿಗೆ ದೇವ್ಲಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಆಕೆಯ ತಂದೆ, ತಾಯಿಯರಿಬ್ಬರೂ ಹತ್ತಿರದ ಕಾರ್ಖಾನೆಯಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರಾಗಿದ್ದರು.

ಆಕೆಯ ತಂದೆ ಶಿವಕುಮಾರ್ ಕೆಲಸಕ್ಕೆ ಹೋಗಿದ್ದ. ಜೊತೆಗೆ ತಾಯಿ ಮಂಜು ಸಹಾ ಮಾರುಕಟ್ಟೆಗೆ ಹೋಗಿದ್ದಳು. ಈ ವೇಳೆ ಮಾನ್ಸಿ ಕಾಣಿಯಾಗಿದ್ದಳು. ಎಷ್ಟೇ ಹುಡುಕಿದರೂ ಕಾಣೆಯಾಗದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಿದ್ದರು.

ಕಳೆದ 2 ದಿನಗಳ ನಂತರ ತನ್ನ ನೆರೆ ಮನೆಯಲ್ಲಿದ್ದ ರಾಘವೇಂದ್ರ ಮನೆಯಿಂದ ದುರ್ವಾಸನೆ ಬರುತ್ತಿದೆ. ಆದರೆ ಮನೆಗೆ ಬೀಗ ಹಾಕಲಾಗಿದೆ ಎಂದು ದೂರಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರ ನೆರವಿನಿಂದ ಶಿವಕುಮಾರ್ ಮನೆ ಪ್ರವೇಶಿಸಿದ್ದಾನೆ. ಈ ವೇಳೆ ಮನೆಯ ಬಾಗಿಲಿಗೆ ನೇತು ಹಾಕಿದ್ದ ಚೀಲದಲ್ಲಿ ಮಾನ್ಸಿಯ ಶವ ಪತ್ತೆಯಾಗಿದೆ.

ಕಳೆದ ವಾರ ಮಗು ಕಾಣೆಯಾದಾಗ ನೆರೆಹೊರೆಯವರು ಆಕೆಯ ಪೋಷಕರಿಗೆ ಮಗುವನ್ನು ಹುಡುಕಲು ಸಹಾಯ ಮಾಡುವಂತೆ ನಟಿಸಿದ್ದರು. ಆದರೆ ಮೃತದೇಹದಿಂದಾಗಿ ಅವರ ಮನೆಯಲ್ಲಿ ವಾಸನೆ ಬರಲು ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಅವರು ನಾಪತ್ತೆ ಆಗಿದ್ದಾರೆ ಎಂದು ಮಾನ್ಸಿ ಪೋಷಕರು ಆರೋಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಪವರ್ ವಾರ್ ಮತ್ತೊಂದು ಹಂತಕ್ಕೆ: ಸಿಎಂ ಹೊಸ ಟ್ವೀಟ್ ನಲ್ಲಿ ಏನಿದೆ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments