ನವದೆಹಲಿ: ಹಾಸಿಗೆ ಹಿಡಿದಿದ್ದ 87 ವರ್ಷದ ವೃದ್ಧೆಯನ್ನು ಕಾಮತೃಷೆ ತೀರಿಸಿಕೊಳ್ಳಲು ಬಳಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವೃದ್ದೆ ಮನೆಯಲ್ಲಿ ಏಕಾಂಗಿಯಾಗಿದ್ದಾಗ ಮನೆಗೆ ನುಗ್ಗಿದ ಕಾಮುಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಸಂದರ್ಭ ವೃದ್ಧೆಯ ಮಗಳು ವಾಕಿಂಗ್ ಹೋಗಿದ್ದರು.
ಮನೆಯೊಳಗೆ ನುಗ್ಗಿದ ವ್ಯಕ್ತಿಯನ್ನು ವೃದ್ಧೆ ಪ್ರಶ್ನಿಸಿದಾಗ ಮೊದಲು ಗ್ಯಾಸ್ ರಿಪೇರಿಗೆ ಬಂದವನೆಂದು ಸುಳ್ಳು ಹೇಳಿದ್ದಾನೆ. ಮಹಿಳೆಗೆ ಆತನ ಮೇಲೆ ಸಂಶಯವಾಗಿ ಸಹಾಯಕ್ಕಾಗಿ ಕಿರುಚಿದ್ದಾಳೆ. ಈ ವೇಳೆ ಆಕೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ. ಬಳಿಕ ವೃದ್ಧೆಯ ಫೋನ್ ಕದ್ದು ಪರಾರಿಯಾಗಿದ್ದಾನೆ. ಪೊಲೀಸರು ಈಗ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.