Publish Date: Sun, 18 Nov 2018 (09:41 IST)
Updated Date: Sun, 18 Nov 2018 (09:43 IST)
ತ್ರಿಪುರಾ: 13 ವರ್ಷದ ಯುವತಿ ಮತ್ತು ಆಕೆಯ ಸಹೋದರಿಯನ್ನು ಎರಡು ದಿನ ಒಂದು ಕೊಠಡಿಯಲ್ಲಿ ಕೂಡಿ ಹಾಕಿ ಮೂವರು ಕಾಮುಕರು ಅತ್ಯಾಚಾರ ನಡೆಸಿದ ಘಟನೆ ತ್ರಿಪುರಾದ ಅಗರ್ತಲಾದಲ್ಲಿ ನಡೆದಿದೆ.
ಈ ಪೈಕಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು ಉಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ಆರೋಪಿ 34 ವರ್ಷದ ಆಟೋ ಚಾಲಕನೆಂದು ಪತ್ತೆಯಾಗಿದೆ.
ಮನೆಗೆ ಮರಳಲು ಬಸ್ ಗಾಗಿ ಕಾಯುತ್ತಿದ್ದ ವೇಳೆ ಡ್ರಾಪ್ ಕೊಡುವ ನೆಪದಲ್ಲಿ ಬಂದ ಆಟೋ ಚಾಲಕ ಸಹೋದರಿಯರನ್ನು ಬೇರೊಂದು ಕಡೆಗೆ ಕರೆದೊಯ್ದು ಇನ್ನಿತರ ಇಬ್ಬರು ಆರೋಪಿಗಳ ಜತೆಗೂಡಿ ಈ ಕೃತ್ಯವೆಸಗಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.