Select Your Language

Notifications

webdunia
webdunia
webdunia
webdunia

ಮಾಟ ಮಂತ್ರ ಮಾಡಿದ್ದಾರೆಂದು ಆರೋಪಿಸಿ ಒಂದೇ ಕುಟುಂಬದವರ ಹತ್ಯೆ

ಅಪರಾಧ ಸುದ್ದಿಗಳು
ನವದೆಹಲಿ , ಶುಕ್ರವಾರ, 30 ಅಕ್ಟೋಬರ್ 2020 (11:14 IST)
ನವದೆಹಲಿ: ಮಾಟ ಮಂತ್ರ ಮಾಡಿ ತಮ್ಮ ನವಜಾತ ಮಗುವಿನ ಜೀವ ತೆಗೆದಿದ್ದಾರೆಂದು ಆರೋಪ ಹೊತ್ತಿದ್ದ ಒಂದೇ ಮನೆಯ ಮೂವರನ್ನು ಹತ್ಯೆ ಮಾಡಲಾಗಿದೆ.


ಈ ಘಟನೆ ನಡೆದಿರುವುದು ಜಾರ್ಖಂಡ್ ನಲ್ಲಿ. ಬಿರ್ಸಾ ಮುಂಡಾ (48), ಪತ್ನಿ ಸುಕ್ರು ಪುರ್ತಿ (43) ಮತ್ತು ಅವರ ಪುತ್ರಿ ಸೋಮ್ವಾರ್ ಪುರ್ತಿ (20) ಎಂಬವರನ್ನು ರುಂಡ ಮುಂಡ ಬೇರ್ಪಡಿಸಿ ಹತ್ಯೆ ಮಾಡಲಾಗಿದೆ. ಇವರ ಮೃತದೇಹ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಸ್ಥಳೀಯರ ಪ್ರಕಾರ ಕೆಲವು ದಿನಗಳ ಮೊದಲು ಮಹಿಳೆಯೊಬ್ಬಳ ನವಜಾತ ಶಿಶುವನ್ನು ಮಾಟ ಮಂತ್ರದ ಹೆಸರಿನಲ್ಲಿ ಹತ್ಯೆ ಮಾಡಲಾಗಿತ್ತು. ಇದೇ ಕುಟುಂಬವೇ ಆ ಕೆಲಸ ಮಾಡಿದೆ ಎಂದು ಆರೋಪಿಸಲಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಈಗ ಕುಟುಂಬದವರ ಎಲ್ಲರನ್ನೂ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದರಿಯ ಓದಿಗೆ ಸಹಾಯ ಮಾಡಲು ಟೀ ಮಾರುತ್ತಿರುವ ಬಾಲಕ!