Select Your Language

Notifications

webdunia
webdunia
webdunia
webdunia

ರಾಜಧಾನಿ ಮಸೂದೆ ರದ್ದು !?

ರಾಜಧಾನಿ ಮಸೂದೆ ರದ್ದು !?
ಆಂಧ್ರಪ್ರದೇಶ , ಗುರುವಾರ, 14 ಏಪ್ರಿಲ್ 2022 (10:53 IST)
ಆಂಧ್ರಪ್ರದೇಶದಲ್ಲಿ 3 ರಾಜಧಾನಿ ಸೃಷ್ಟಿಸುವ ವಿವಾದಾತ್ಮಕ ಕಾಯ್ದೆಯನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಆಂಧ್ರ ಹೈಕೋರ್ಟ್ಗೆ ಸೋಮವಾರ ಜಗನ್ಮೋಹನ ರೆಡ್ಡಿ ಸರ್ಕಾರ ಹೇಳಿದೆ.

ಇದರ ಬೆನ್ನಲ್ಲೇ ಸಂಪುಟ ಸಭೆಯಲ್ಲಿ ಈ ಕುರಿತು ಅಧಿಕೃತ ನಿರ್ಧಾರವನ್ನು ಜಗನ್ ಸರ್ಕಾರ ಕೈಗೊಂಡಿದೆ. ಆದರೆ ಅದರ ಬೆನ್ನಲ್ಲೇ ವಿಧಾನಸಭೆಯಲ್ಲಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ,

ತಮ್ಮ ಸರ್ಕಾರ ಶೀಘ್ರವೇ ‘ಸಂಪೂರ್ಣ, ಸಮಗ್ರ ಮತ್ತು ಅತ್ಯುತ್ತಮವಾದ’ ಅಂಶಗಳನ್ನು ಒಳಗೊಂಡ ಮಸೂದೆ ತರಲಿದೆ. ಈ ಮೂಲಕ ವಿಕೇಂದ್ರಿಕೃತ ಅಭಿವೃದ್ಧಿ ಜಾರಿಯ ಕನಸು ಈಡೇರಿಗೆ ಬದ್ಧ ಎಂದು ಘೋಷಿಸಿದ್ದಾರೆ.

ವಿಶೇಷವೆಂದರೆ ವಿಧಾನಸಭೆಯಲ್ಲಿ 3 ರಾಜಧಾನಿ ರಚನೆಯ ಮಸೂದೆ ಹಿಂಪಡೆಯುವ ವಿಷಯದ ಕುರಿತು ಮಾತನಾಡುವಾಗ ಒಂದೇ ಒಂದು ಬಾರಿಯೂ ಜಗನ್, ಅಮರಾವತಿ ಹೆಸರನ್ನು ಪ್ರಸ್ತಾಪಿಸಲಿಲ್ಲ. ಬದಲಾಗಿ ಹೆಸರನ್ನು ಈ ವಲಯ, ಆ ವಲಯ ಎಂದಷ್ಟೇ ಸಂಬೋಧಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಲಸಿಕೆ ಪಟ್ಟಿಯಲ್ಲಿ ಕೋವ್ಯಾಕ್ಸಿನ್ಗೆ ಮಾನ್ಯತೆ