Select Your Language

Notifications

webdunia
webdunia
webdunia
webdunia

ಜಗನ್ ಮೋಹನ್ ರೆಡ್ಡಿ ಸಂಪುಟ ಪುನಾರಚನೆ

ಜಗನ್ ಮೋಹನ್ ರೆಡ್ಡಿ ಸಂಪುಟ ಪುನಾರಚನೆ
ಹೈದರಾಬಾದ್ , ಸೋಮವಾರ, 11 ಏಪ್ರಿಲ್ 2022 (07:09 IST)
ಹೈದರಾಬಾದ್ : ತನ್ನ ಸಚಿವ ಸಂಪುಟವನ್ನು ಮಧ್ಯಾವಧಿಯಲ್ಲಿ ಪುನಾರಚನೆ ಮಾಡುವುದಾಗಿ ಜೂನ್ 2019ರಲ್ಲಿ ನೀಡಿದ ಭರವಸೆಯಂತೆ,
 
ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಭಾನುವಾರ  ಸಂಪುಟ ಪುನರಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೊಸ ಸಚಿವ ಸಂಪುಟದಲ್ಲಿ  ಹಿರಿಯ ಮತ್ತು ಅನುಭವಿ ನಾಯಕರ ಜೊತೆಗೆ ಸಮತೋಲಿತ ಆಡಳಿತಕ್ಕಾಗಿ ತಾಜಾ ಮತ್ತು ಯುವ ಮುಖಗಳಿಗೂ ಅವಕಾಶ ನೀಡಲಾಗಿದೆ.

ಹಿರಿಯ ಸಚಿವರು ತಮ್ಮ ಪರಿಣತಿ ಮತ್ತು ಅನುಭವವನ್ನು ಮೇಲೆ ತಂದರೆ, ಯುವ ನಾಯಕರು ತಮ್ಮ ನವೀನ ಆಲೋಚನೆಗಳು ಮತ್ತು ಯೋಜನೆಗಳನ್ನು ಕಾರ್ಯರೂಪಕ್ಕೆ ಇಳಿಸಲಿದ್ದಾರೆ. ಈ ಮೂಲಕ ಜನ-ಆಧಾರಿತ ಆಡಳಿತವನ್ನು ಜಗನ್ ಸರ್ಕಾರ  ಕೇಂದ್ರೀಕರಿಸುತ್ತಿದೆ.

ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಹೊಸ ಕ್ಯಾಬಿನೆಟ್ನಲ್ಲಿರುವ 25 ಸಚಿವರಲ್ಲಿ ಕನಿಷ್ಠ 17 ಮಂದಿಯನ್ನು 2024ರ ಚುನಾವಣೆಗೆ ಮುಂಚಿತವಾಗಿ ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಖಚಿತಪಡಿಸಿಕೊಳ್ಳಲು  ಸಂಪುಟದಲ್ಲಿ ಸೇರಿಸಲಾಗಿದೆ ಎನ್ನಲಾಗುತ್ತಿದೆ.

ಈ 17 ಸಚಿವರನ್ನು  ಎಸ್ಸಿ, ಎಸ್ಟಿ, ಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯದಿಂದ ಆಯ್ಕೆ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹಿಂದಿನ ಸಂಪುಟದಲ್ಲಿ ಈ ಸಮುದಾಯಗಳ 14 ನಾಯಕರಿದ್ದರು.

ಅಧಿಕೃತ ಘೋಷಣೆಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದ್ದರೂ, ಪ್ರಮಾಣ ವಚನ ಸಮಾರಂಭವು ಏಪ್ರಿಲ್ 11, ಸೋಮವಾರದಂದು ನಡೆಯಲಿದೆ . ಹೊಸ ಅಚಿವರ ಈ ಪಟ್ಟಿಯನ್ನು ಆಂಧ್ರಪ್ರದೇಶ ರಾಜ್ಯಪಾಲ ಬಿಸ್ವಭೂಷಣ ಹರಿಚಂದನ್ ಅವರಿಗೆ ಹಸ್ತಾಂತರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ಹೆಚ್ಚಳ : ಭಾರತಕ್ಕೆ 4ನೇ ಅಲೆ!