Publish Date: Tue, 12 Apr 2022 (08:37 IST)
Updated Date: Tue, 12 Apr 2022 (08:52 IST)
ಮುಂಬೈ : 16 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯೊಬ್ಬನಿಗೆ ಕಾಂಡೋಮ್ ಬಳಸಿದ್ದಾನೆ ಹಾಗೂ ಕೃತ್ಯದ ಪರಿಣಾಮ ಆಕೆಗೆ ಅರಿವಿತ್ತು ಎಂಬ ಅಂಶಗಳನ್ನು ಗುರುತಿಸಿ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
2019ರ ಸೆಪ್ಟೆಂಬರ್ 9 ರಂದು ಕೊಲ್ಲಾಪುರ ಪೊಲೀಸರು ಬಂಧನದಲ್ಲಿರಿಸಿದ್ದ ಆರೋಪಿಯ ಜಾಮೀನು ಅರ್ಜಿಯನ್ನು ಏಕ-ನ್ಯಾಯಾಧೀಶ ಪೀಠದ ಸಿ.ವಿ.ಭದಂಗ್ ವಿಚಾರಣೆ ನಡೆಸಿ, ಜಾಮೀನು ನೀಡಲು ಮುಂದಾಗಿದ್ದಾರೆ.
ಆರೋಪಿಯು 2 ವರ್ಷಕ್ಕಿಂತ ಹೆಚ್ಚು ಕಾಲ ಪೊಲೀಸ್ ಬಂಧನದಲ್ಲಿದ್ದಾನೆ ಎಂಬುದನ್ನು ಪರಿಗಣಿಸಿ 25,000 ರೂ. ಶ್ಯೂರಿಟಿಯೊಂದಿಗೆ ಅವರಿಗೆ ಜಾಮೀನು ನೀಡಲಾಗಿದೆ.
ಸಂತ್ರಸ್ತೆಗೆ 16 ವರ್ಷ 6 ತಿಂಗಳ ವಯಸ್ಸಾಗಿದ್ದರಿಂದ ಮತ್ತು ಆಕೆಗೆ ಕ್ರಿಯೆಯ ಪರಿಣಾಮಗಳ ಬಗ್ಗೆ ಅರಿವಿದೆ ಎಂದು ಗಮನಿಸುವುದು ಅವಶ್ಯವಾಗಿದೆ. ಇದರಲ್ಲಿ ಯಾವುದೇ ಬಲವಂತದ ಅಂಶಗಳಿಲ್ಲ ಎಂದು ಸೂಚಿಸುವ ಸಂದರ್ಭಗಳಿವೆ.
ಅಲ್ಲದೆ ವೈದ್ಯಕೀಯ ವರದಿಯ 15 (F)ರ ಪ್ರಕಾರ ಅರ್ಜಿದಾರರು ಸಂಭೋಗದ ವೇಳೆ ರಕ್ಷಣೆ (ಕಾಂಡೋಮ್) ಸಹ ಬಳಸಿದ್ದಾರೆಂಬುದನ್ನು ಎಂಬಿತ್ಯಾದಿ ಅಂಶಗಳನ್ನು ನ್ಯಾಯಾಲಯ ಗುರುತಿಸಿದೆ.