Select Your Language

Notifications

webdunia
webdunia
webdunia
webdunia

ಯಾರು ಅಡುಗೆ ಮಾಡಬೇಕು? ಬಾಯ್‌ಫ್ರೆಂಡ್‌ನನ್ನು ಹತ್ಯೆ ಮಾಡಿದ ಯುವತಿ

ಯಾರು ಅಡುಗೆ ಮಾಡಬೇಕು? ಬಾಯ್‌ಫ್ರೆಂಡ್‌ನನ್ನು ಹತ್ಯೆ ಮಾಡಿದ ಯುವತಿ
ನವದೆಹಲಿ , ಸೋಮವಾರ, 21 ಆಗಸ್ಟ್ 2017 (15:10 IST)
ರಾತ್ರಿಯ ಅಡುಗೆ ಯಾರು ಮಾಡುತ್ತಾರೆ ಎನ್ನುವ ವಾದ ವಿವಾದ ವಿಕೋಪಕ್ಕೆ ತೆರಳಿದಾಗ, ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ನನ್ನು ಹತ್ಯೆಗೈದ ಹೃದಯವಿದ್ರಾವಕ ಘಟನೆ ಉತ್ತಮ ನಗರದಲ್ಲಿ ನಡೆದಿದೆ.
28 ವರ್ಷ ವಯಸ್ಸಿನ ಯುವತಿ ಎಲ್ವಿ ಉಜುಮ್ಮಾ, ತನ್ನ ನೈಜೇರಿಯಾ ಬಾಯ್‌ಫ್ರೆಂಡ್ ಎಜು ಎಂಬಾತನನ್ನು ಚಾಕುನಿಂದ ಹಲವು ಬಾರಿ ತಿವಿದು ಹತ್ಯೆ ಮಾಡಿದ್ದಾಳೆ. ಘಟನೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ಉಜುಮ್ಮ ಅವರು ಮಧ್ಯಾಹ್ನ ತನ್ನ ಮನೆಗೆ ಬರುವಂತೆ ಎಜುಗೆ ಆಹ್ವಾನಿಸಿದ್ದರು. ಆದರೆ, ಎಜು ಮನೆಗೆ ಬಂದ ಕೆಲ ಸಮಯದಲ್ಲಿಯೇ ಇಬ್ಬರ ನಡುವೆ ವಾದ ಆರಂಭವಾಗಿದೆ. ಗಲಾಟೆ ಹೆಚ್ಚಾಗುತ್ತಿದ್ದಂತೆ ನೆರೆಯವರು ಮಧ್ಯಪ್ರವೇಶಿಸಿದ ಬಳಿಕ ಇಬ್ಬರೂ ಸಮಾಧಾನಗೊಂಡಿದ್ದರು. 
 
ಆದಾಗ್ಯೂ, ನೆರೆಯವರು ಹೊರಹೋದ ನಂತರ ಮತ್ತೆ ವಾದ ಆರಂಭವಾಯಿತು. ಯಾರು ಅಡುಗೆ ಮಾಡಬೇಕು ಎನ್ನುವ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿ ವಿಕೋಪಕ್ಕೆ ತಲುಪಿದೆ.
 
ಎಲ್ವಿ ಉಜ್ಮಾ, ಅಡಿಗೆ ಮನೆಯಿಂದ ಚಾಕು ತಂದು ಬಾಯ್‌ಫ್ರೆಂಡ್‌ನನ್ನು ಹೆದರಿಸಲು ಪ್ರಯತ್ನಿಸಿದ್ದಾಳೆ. ಆದರೆ, ಎಜು ಮತ್ತೆ ದಾಳಿ ಮಾಡಲು ಯತ್ನಿಸಿದಾಗ, ಕೋಪಗೊಂಡ ಆಕೆ ತನ್ನ ಕೈಯಲ್ಲಿದ್ದ ಚಾಕುವಿನಿಂದ ಹಲವಾರು ಬಾರಿ ಇರಿದಿದ್ದಾಳೆ. ನಂತರ ತನ್ನ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ.  ಸುಮಾರು ಅರ್ಧ ಗಂಟೆಯ ನಂತರ ಹೊರಬಂದು ನೋಡಿದಾಗ ತನ್ನ ಬಾಯ್‌ಫ್ರೆಂಡ್‌ ರಕ್ತದ ಮಡುವಿನಲ್ಲಿರುವುದು ಕಂಡು ಆಘಾತಗೊಂಡು ತಮ್ಮ ಗೆಳಯರಿಗೆ ಕರೆ ಮಾಡಿದ್ದಾಳೆ.
 
ಚಾಕುವಿನಿಂದ ಇರಿತಕ್ಕೊಳಗಾದ ಎಜುನನ್ನು ಆಸ್ಪತ್ರೆಗೆ ಕರೆದುಕೊಂಡ ಹೋಗಲಾಗಿದೆ. ಆದರೆ, ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಅಭ್ಯರ್ಥಿ ಸಿಎಂ ಇಬ್ರಾಹಿಂ ಅವಿರೋಧ ಆಯ್ಕೆ ಸಾಧ್ಯತೆ