Select Your Language

Notifications

webdunia
webdunia
webdunia
Sunday, 13 April 2025
webdunia

ಆತ ನನ್ನ ಲವರ್ ಅಲ್ಲ, ಗೆಳೆಯ: ಶ್ರುತಿ ಹಾಸನ್

ನಟಿ ಶ್ರುತಿ ಹಾಸನ್
Chennai , ಭಾನುವಾರ, 19 ಫೆಬ್ರವರಿ 2017 (11:59 IST)
ಗ್ಲಾಮರಸ್ ಲುಕ್‌ನೊಂದಿಗೆ ಸದಾ ಸುದ್ದಿಯಲ್ಲಿರುವ ನಟಿ ಶ್ರುತಿ ಹಾಸನ್ ಕೆಲ ದಿನಗಳ ಹಿಂದೆ ವಿದೇಶಿ ನಟನೊಂದಿಗೆ ಕೈಕೈ ಹಿಡಿದುಉ ಓಡಾಡುತ್ತಿರುವ ಸುದ್ದಿ ಸದ್ದು ಮಾಡಿತ್ತು. ಇಟಲಿ ಮೂಲದ ರಂಗಭೂಮಿ ಕಲಾವಿದ ಮೈಖೇಲ್ ಜತೆಗೆ ಶ್ರುತಿ ಡೇಟಿಂಗ್ ಮಾಡುತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
 
ಪ್ರೇಮಿಗಳ ದಿನವನ್ನು ಇವರಿಬ್ಬರೂ ಭಾರತದಲ್ಲಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದರ ಜತೆಗೆ ಇವರಿಬ್ಬರ ಫೋಟೋಗಳು ಬಿಡುಗಡೆಯಾಗಿ ಹಾಟ್ ಟಾಪಿಕ್ ಆಗಿ ಬದಲಾಗಿತ್ತು. ಈ ಬಗ್ಗೆ ಶ್ರುತಿ ಹಾಸನ್ ಪ್ರತಿಕ್ರಿಯಿಸಿದ್ದಾರೆ.
 
ಮೈಖೇಲ್ ಕೇವಲ ನನಗೆ ಗೆಳೆಯನಷ್ಟೆ. ಅದಕ್ಕು ಮೀರಿ ನಮ್ಮ ನಡುವೆ ಏನೇನು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಟನಟಿಯರ ಮೇಲೆ ಈ ರೀತಿಯ ವದಂತಿಗಳು ಸಾಮಾನ್ಯ, ಅದಕ್ಕೆ ಅಷ್ಟೆಲ್ಲಾ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ. ತನ್ನ ಕೆರಿಯರ್ ಬಗ್ಗೆ ಮಾತನಾಡುತ್ತಾ, ಸಿಂಗಂ 3ಯಲ್ಲಿ ತನ್ನ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿನಯಕ್ಕೆ ಪ್ರಾಮುಖ್ಯತೆಯುಳ್ಳ ಪಾತ್ರಗಳಲ್ಲಿ ನಟಿಸಲು ತಾನು ಇಷ್ಟಪಡುತ್ತೇನೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಧನುಷ್ ಸ್ಕೂಲ್ ಸರ್ಟಿಫಿಕೇಟ್‌ನಲ್ಲಿ ಹುಟ್ಟುಮಚ್ಚೆಗಳಿಲ್ಲ’