Select Your Language

Notifications

webdunia
webdunia
webdunia
webdunia

’ಧನುಷ್ ಸ್ಕೂಲ್ ಸರ್ಟಿಫಿಕೇಟ್‌ನಲ್ಲಿ ಹುಟ್ಟುಮಚ್ಚೆಗಳಿಲ್ಲ’

’ಧನುಷ್ ಸ್ಕೂಲ್ ಸರ್ಟಿಫಿಕೇಟ್‌ನಲ್ಲಿ ಹುಟ್ಟುಮಚ್ಚೆಗಳಿಲ್ಲ’
Chennai , ಭಾನುವಾರ, 19 ಫೆಬ್ರವರಿ 2017 (11:53 IST)
ತಮಿಳು ಸಿನಿಮಾ ನಟ ಧನುಷ್‌ಗೆ ಸಂಬಂಧಿಸಿದಂತೆ ಹುಟ್ಟುಮಚ್ಚೆಗಳ ವಿವರಗಳುಳ್ಳ ವರದಿಯನ್ನು ಸಲ್ಲಿಸಬೇಕೆಂದು ಮಧುರೈ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ. ಧನುಷ್ ತನ್ನ ಮಗ ಎಂದು ಮಧುರೈ ಮೂಲದ ದಂಪತಿಗಳು ಪ್ರಕರಣ ದಾಖಲಿಸಿದ್ದ ಕಾರಣ ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶಿಸಿದೆ.
 
ಮಧುರೈ ಸಮೀಪ ಮೇಲೂರಿನಲ್ಲಿ ವಾಸಿಸುತ್ತಿರುವ ಕದಿರೇಷನ್, ಮೀನಾಕ್ಷಿ ದಂಪತಿಗಳು ಧನುಷ್ ತನ್ನ ಪುತ್ರನೆಂದೂ, ಈಗ ಜೀವನ ನಡೆಸುವುದು ಕಷ್ಟವಾಗಿರುವ ಕಾರಣ ತಿಂಗಳಿಗೆ ಸರಿಹೊಂದುವಷ್ಟು ಆರ್ಥಿಕ ಸಹಾಯ ಮಾಡಬೇಕೆಂದು ಆದೇಶಿಸಬೇಕೆಂದು ಕೋರಿ ಮಧುರೈ ಹೈಕೋರ್ಟ್‌ ಮೆಟ್ಟಿಲೇರಿದ್ದರು.
 
ಈ ಪ್ರಕರಣದ ವಿಚಾರಣೆಗಾಗಿ ಕೋರ್ಟ್‌ಗೆ ಹಾಜರಾಗಬೇಕೆಂದು ಧನುಷ್‍ಗೆ ಕೋರ್ಟ್ ನೋಟೀಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಧನುಷ್ ಕೌಂಟರ್ ಅಫಿಡವಿಟ್ಟನ್ನು ದಾಖಲಿಸಿದ್ದು, ಸದ್ಯಕ್ಕೆ ತಾನು ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿರುವ ಕಾರಣ ಕೋರ್ಟ್‌ಗೆ ಹಾಜರಾಜರಾಗಲು ಸಾಧ್ಯವಾಗುತ್ತಿಲ್ಲ. ತನ್ನ ಮೇಲಿನ ಆರೋಪ ಸುಳ್ಳಾಗಿದ್ದು, ಅದನ್ನು ರದ್ದುಪಡಿಸಬೇಕೆಂದು ಕೋರಿದ್ದರು.
 
ಧನುಷ್ ಸಲ್ಲಿಸಿದ್ದ ಕೌಂಟರ್ ಅಫಿಡವಿಟನ್ನು ನ್ಯಾಯಮೂರ್ತಿ ಜಿ ಚೊಕ್ಕಲಿಂಗಂ ಪರಿಶೀಲಿಸಿ. ಈ ಪ್ರಕರಣದಲ್ಲಿ ಧನುಷ್ ಸಲ್ಲಿಸಿದ್ದ ಶಾಲಾ ಪ್ರಮಾಣಪತ್ರಗಳಲ್ಲಿ ಹುಟ್ಟುಮಚ್ಚೆಗಳ ಬಗ್ಗೆ ವಿವರಗಳಿಲ್ಲವೆಂದು ನ್ಯಾಯಮೂರ್ತಿ ಹೇಳುತ್ತಾ, ಪ್ಲಸ್ ಟು ಓದುತ್ತಿರಬೇಕಾದರೆ ತಿರುಪತ್ತೂರು ಸ್ಕೂಲು ಧನುಷ್‌ಗೆ ನೀಡಿರುವ ಟ್ರಾನ್ಸಫರ್ ಸರ್ಟಿಫಿಕೇಟ್ ಜತೆಗೆ ಹುಟ್ಟುಮಚ್ಚೆಗಳ ವಿವರಗಳುಳ್ಳ ವರದಿಯನ್ನು ಸಲ್ಲಿಸಬೇಕೆಂದು ಆದೇಶಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಈ ಫೆ. 22ಕ್ಕೆ ಮುಂದೂಡಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ರಾಜ್‍ಕುಮಾರ್ ಸಿವಿಲ್ ಸರ್ವಿಸಸ್ ತರಬೇತಿ ಕೇಂದ್ರ