Select Your Language

Notifications

webdunia
webdunia
webdunia
webdunia

ಬಾಯ್‌ಫ್ರೆಂಡ್ ಜೊತೆಗೆ ಸೋನಂ ಕಪೂರ್

ಬಾಯ್‌ಫ್ರೆಂಡ್ ಜೊತೆಗೆ ಸೋನಂ ಕಪೂರ್
Mumbai , ಸೋಮವಾರ, 12 ಡಿಸೆಂಬರ್ 2016 (12:08 IST)
ಪ್ರೇಮ ವ್ಯವಹಾರಗಳು ಬಾಲಿವುಡ್ ನಟನಟಿಯರಿಗೇನು ಹೊಸದಲ್ಲ. ಅನಿಲ್ ಕಪೂರ್ ಮಗಳು ಎಂದು ಸಿನಿಮೋದ್ಯಮಕ್ಕೆ ಅಡಿಯಿಟ್ಟ ಸೋನಂ ಕಪೂರ್ ತಾನೇನು ಎಂದು ನಿರೂಪಿಸಿಕೊಂಡರು. ಫ್ಯಾಷನ್ ಐಕಾನ್ ಆಗಿ ಅವರಿಗೆ ಹೆಸರಿದೆ.
 
ನೀರ್ಜಾ ಚಿತ್ರದಲ್ಲಿನ ಅಭಿನಯ ಅವರನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯಿತು. ಆದರೆ ಈ ನಡುವೆ ಸಿನಿಮಾಗಿಂತ ವೈಯಕ್ತಿಕ ವಿಷಯಗಳ ಕಡೆಗೆ ಹೆಚ್ಚಿನ ಗಮನಸೆಳೆಯುತ್ತಿದ್ದಾರೆ. ಬಾಯ್ ಫ್ರೆಂಡ್ ಆನಂದ್ ಅಹುಜಾ ಜೊತೆಗಿನ ಪ್ರೇಮಯಣದ ಬಗ್ಗೆ ಮಾಧ್ಯಮಗಳು ಎಷ್ಟು ಪ್ರಶ್ನಿಸಿದರೂ ನೋ ಕಾಮೆಂಟ್ ಅಂತಿದ್ದಾರೆ. 
 
ಇತ್ತೀಚೆಗೆ ಈ ಜೋಡಿ ಮುಂಬೈ ಏರ್‌ಪೋರ್ಟಲ್ಲಿ ಕಾಣಿಸಿಕೊಂಡಿತು. ಅಹುಜಾ ಜೊತೆ ಲಾಸ್ ಏಂಜಲೀಸ್‌ಗೆ ಹೊರಟ ಸೋನಂ ಅಲ್ಲಿ ಒಂದಷ್ಟು ದಿನ ಮಜಾ ಮಾಡಿ ಮುಂಬೈಗೆ ವಾಪಸ್ ಆಗಿದ್ದಾರೆ ಎಂಬುದು ಬಾಲಿವುಡ್ ಸಮಾಚಾರ. 
 
ಈ ತಿಂಗಳ 13ರಂದು ನಡೆಯಲಿರುವ ಫ್ಯಾಷನ್ ಶೋಗೆ ಅಹುಜಾ ಜೊತೆಗೆ ಸೋನಂ ಬರಲಿದ್ದಾರೆ ಎಂದು ಮುಂಬೈ ಸ್ಥಳೀಯ ಮಾಧ್ಯಮಗಳು ಹೇಳಿವೆ. ಎರಡು ತಿಂಗಳ ಹಿಂದೆ ಅವರ ತಮ್ಮ ಹರ್ಷವರ್ಧನ್‌ನ್ನು ಪ್ರೊಮೋಟ್ ಮಾಡಲು ಲಂಡನ್‌ಗೆ ಹೋದಾಗ ಅವರ ಜೊತೆ ಅಹುಜಾ ಸಹ ಇದ್ದನಂತೆ. ಅವರೊಂದಿಗೆ ಬೆರೆತು ಶಾಪಿಂಗ್ ಮಾಡುವುದು ಅವರಿಗೆ ಅಭ್ಯಾಸವಾಗಿದೆ. ಅಹುಜಾ ಒಬ್ಬ ಗುಡ್ ಫ್ರೆಂಡ್ ಎಂದು ಹೇಳುವ ಸೋನಂ ಅದಕ್ಕಿಂತ ಹೆಚ್ಚಿಗೆ ಪ್ರಶ್ನಿಸಿದರೆ ಅಲ್ಲಿಂದ ಜಾಗ ಕಾಲಿ ಮಾಡುತ್ತಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ದಿನ ಗಲ್ಲಾಪೆಟ್ಟಿಗೆಯಲ್ಲಿ ಝಣಝಣ ಸೌಂಡ್