Daily Horoscope

Select Your Language

Notifications

webdunia
webdunia
webdunia
webdunia

ಎರಡನೇ ದಿನ ಗಲ್ಲಾಪೆಟ್ಟಿಗೆಯಲ್ಲಿ ಝಣಝಣ ಸೌಂಡ್

ಬಾಲಿವುಡ್ ಚಿತ್ರ ಬೇಫಿಕ್ರೆ
ರಣವೀರ್ ಸಿಂಗ್, ವಾಣಿ ಕಪೂರ್ ಜೋಡಿಯಾಗಿ ಅಭಿನಯಿಸಿರುವ ಬಾಲಿವುಡ್ ಸಿನಿಮಾ ’ಬೇಫಿಕ್ರೆ’ ಕಲೆಕ್ಷನ್‍ ಎರಡನೇ ದಿನ ಸದ್ದು ಮಾಡಿದೆ. ಶುಕ್ರವಾರ ಬಿಡುಗಡೆಯಾದ ಈ ಚಿತ್ರ ಮೊದಲ ದಿನ ರೂ.10.36 ಕೋಟಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ರೂ.11.60 ಕೋಟಿಗೆ ಸೇರಿದೆ.
 
ಎರಡು ದಿನಗಳಲ್ಲಿ ಒಟ್ಟಾರೆ ರು.21.96 ಕೋಟಿ ಕಲೆಕ್ಷನ್ ಆಗಿದೆ. ಈ ಸಿನಿಮಾದಲ್ಲಿ ರಣವೀರ್ ಕಪೂರ್ ಮತ್ತು ವಾಣಿ ಕಪೂರ್ ಲಿಪ್ ಲಾಕ್ ಸನ್ನಿವೇಶಗಳಲ್ಲಿ ಭರ್ಜರಿಯಾಗಿ ಪರ್ಫಾಮೆನ್ಸ್ ನೀಡಿದ್ದಾರೆ. ವಿಶೇಷ ಎಂದರೆ ಈ ಚಿತ್ರ ದೇಶದಾದ್ಯಂತೆ 2100 ತೆರೆಗಳನ್ನು ಅಲಂಕರಿಸಿತ್ತು. ವಿಮರ್ಶಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಕಲೆಕ್ಷನ್‍ನಲ್ಲಿ ಮಾತ್ರ ಭರ್ಜರಿಯಾಗಿ ಮುನ್ನಡೆಯುತ್ತಿದೆ. 
 
ಆದಿತ್ಯ ಛೋಪ್ರಾ ನಿರ್ದೇಶನ, ನಿರ್ಮಾಣ, ಕಥೆ ಚಿತ್ರಕಥೆ ಈ ಚಿತ್ರಕ್ಕಿದೆ. ಪ್ಯಾರಿಸ್ ಮತ್ತು ಮುಂಬೈನಲ್ಲಿ ಈ ಚಿತ್ರವನ್ನು 50 ದಿನಗಳ ಕಾಲ ಚಿತ್ರೀಕರಿಸಲಾಗಿತ್ತು.  ಸುಮಾರು ರು.70 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿರುವ ಸಿನಿಮಾ ಇದು. ಕಲೆಕ್ಷನ್ ಹೀಗೆ ಮುಂದುವರೆದರೆ ಲಾಭದಲ್ಲಿ ಮುನ್ನಡೆಯುವ ಸೂಚನೆ ಕೊಟ್ಟಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಜೊತೆಗೆ ಹರ್ಭಜನ್ ಸಿಂಗ್ ಜಾಲಿ ರೈಡ್ ನೋಡಿ