Select Your Language

Notifications

webdunia
webdunia
webdunia
webdunia

ಭೀಕರ ರಸ್ತೆ ಅಪಘಾತದಲ್ಲಿ 20 ಮಂದಿ ಸಾವು!

ಭೀಕರ ರಸ್ತೆ ಅಪಘಾತದಲ್ಲಿ 20 ಮಂದಿ ಸಾವು!
ಬೊಗೋಟಾ , ಭಾನುವಾರ, 16 ಅಕ್ಟೋಬರ್ 2022 (11:32 IST)
ಬೊಗೋಟಾ : ನೈರುತ್ಯ ಕೊಲಂಬಿಯಾದ ಪ್ಯಾನ್-ಅಮೆರಿಕ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಪಲ್ಟಿಯಾಗಿ 20 ಮಂದಿ ದಾರುಣ ಸಾವಿಗೀಡಾದ ಘಟನೆ ತಡರಾತ್ರಿ ನಡೆದಿದೆ.
 
ಕನಿಷ್ಠ 20 ಮಂದಿ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 3 ವರ್ಷದ ಬಾಲಕಿ ಮತ್ತು 8 ವರ್ಷದ ಬಾಲಕ ಸೇರಿದ್ದಾರೆ. ಈ ಬಸ್ಸು ಕೊಲಂಬಿಯಾದ ಟೊಮಾಕೊ ಬಂದರು ನಗರ ಹಾಗೂ ಈಶಾನ್ಯ ನಡುವೆ ಪ್ರಯಾಣಿಸುತ್ತಿತ್ತು ಎಂಬುದಾಗಿ ನರಿನೋ ವಿಭಾಗದ ಟ್ರಾಫಿಕ್ ಪೊಲೀಸ್ ಕ್ಯಾಪ್ಟನ್ ಆಲ್ಬರ್ಟ್ಲ್ಯಾಂಡ್ ಅಗುಡೆಲೊ ತಿಳಿಸಿದ್ದಾರೆ.

ಮಂಜು ಕವಿದ ವಾತಾವರಣದಿಂದಾಗಿ ಚಾಲಕನ ನಿಯಂತ್ರಣ ತಪ್ಪಿದೆ ಎಂಬುದಾಗಿ ಪ್ರಾಥಮಿಕ ವರದಿ ಹೇಳಿದೆ. ಇನ್ನೇನಾದರೂ ತಾಂತ್ರಿಕ ವ್ಯವಸ್ಥೆಗಳಲ್ಲಿ ವ್ಯತ್ಯಾಸವಾಗಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯನ್ನು ರೇಪ್ ಮಾಡಿ ಕೊಲೆ ಮಾಡಿದ್ದ ವ್ಯಕ್ತಿಗೆ ಮರಣದಂಡನೆ!