Select Your Language

Notifications

webdunia
webdunia
webdunia
webdunia

ಮಾತು ಕೇಳದೇ ಜೀನ್ಸ್ ಧರಿಸಿದ ಯುವತಿ ಕೊಂದ ಅಜ್ಜ, ಚಿಕ್ಕಪ್ಪಂದಿರು!

punjab
bengaluru , ಗುರುವಾರ, 22 ಜುಲೈ 2021 (20:06 IST)
ತಮ್ಮ ಮಾತನ್ನು ಧಿಕ್ಕರಿಸಿ ಜೀನ್ಸ್ ಧರಿಸುತ್ತಿದ್ದ ಯುವತಿಯನ್ನು ಅಜ್ಜ ಹಾಗೂ ಚಿಕ್ಕಪ್ಪಂದಿರು ಹೊಡೆದು ಕೊಂದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಸಾವ್ರೆಜಿ ಖಾರ್ಗ್ ಗ್ರಾಮದ 17 ವರ್ಷದ ಯುವತಿಯನ್ನು ಕೊಂದಿದ್ದೂ ಅಲ್ಲದೇ ಶವವನ್ನು ಶವವನ್ನು ಕಶ್ಯ-ಪಾಟ್ನಾ ಹೆದ್ದಾರಿಯಲ್ಲಿರುವ ಪತನ್ವಾ ಸೇತುವೆಯಿಂದ ಎಸೆದಿದ್ದು, ಅದು ಸೇತುವೆಯ ಗ್ರಿಲ್ ಗೆ ಸಿಕ್ಕಿಹಾಕಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸೋಮವಾರ ಜೀನ್ಸ್ ಮತ್ತು ಟಾಪ್ ಧರಿಸದಂತೆ ಒತ್ತಾಯಿಸಿದ್ದರು. ಆದರೆ ಈ ಮಾತುಗಳನ್ನು ಧಿಕ್ಕರಿಸಿದ್ದರಿಂದ ಅಜ್ಜ, ಚಿಕ್ಕಪ್ಪಂದಿರು ಸೇರಿಕೊಂಡು ತೀವ್ರವಾಗಿ ಥಳಿಸಿದ್ದಾರೆ. ಥಳಿತದಿಂದಾಗಿ ಯುವತಿ ಮೃತಪಟ್ಟಿದ್ದಾಳೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ತಾಯಿ ನೀಡಿದ ದೂರಿನ ಪ್ರಕಾರ, ಬಾಲಕಿ ತಲೆಯನ್ನು ಗೋಡೆಗೆ ಗುದ್ದಿದ್ದರಿಂದ ಆಕೆಗೆ ಗಂಭೀರವಾದ ಗಾಯವಾಗಿದ್ದು ಆಕೆಯ ಸಾವಿಗೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ತಲೆಗೆ ತೀವ್ರವಾದ ಗಾಯ ಮತ್ತು ಮುರಿತ ಕೂಡ ಖಚಿತವಾಗಿದೆ ಎಂದು ಸರ್ಕಲ್ ಅಧಿಕಾರಿ ಯಶ್ ತ್ರಿಪಾಠಿ ತಿಳಿಸಿದ್ದಾರೆ.
ಮೃತ ಬಾಲಕಿಯ ತಾಯಿ, ಅಜ್ಜಿ ಸೇರಿದಂತೆ 10 ಜನರ ವಿರುದ್ಧ ದೂರು ನೀಡಿದ್ದಾರೆ. ಸೆಕ್ಷನ್ 201(ಅಪರಾಧ ಸಾಕ್ಷಿ ನಾಶ ಯತ್ನ), 302(ಕೊಲೆ) ಮತ್ತು ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಹಾವಾಡಿ ಎಸ್‌ಎಚ್‌ಒ ರಾಮ್ ಮೋಹನ್ ಸಿಂಗ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಭಟನಾ ನಿರತ ರೈತರು ಗೂಂಡಾಗಳು: ಕೇಂದ್ರ ಸಚಿವೆ ಲೇಖಿ ವಿವಾದಾತ್ಮಕ ಹೇಳಿಕೆ