Select Your Language

Notifications

webdunia
webdunia
webdunia
webdunia

ಆಟವಾಡಲು ಬಂದ ಅಪ್ರಾಪ್ತ ಬಾಲಕರಿಗೆ 13 ವರ್ಷದ ಹುಡುಗ ಹೀಗಾ ಮಾಡೋದು?

ಆಟವಾಡಲು ಬಂದ ಅಪ್ರಾಪ್ತ ಬಾಲಕರಿಗೆ 13 ವರ್ಷದ ಹುಡುಗ ಹೀಗಾ ಮಾಡೋದು?
ಪುಣೆ , ಭಾನುವಾರ, 8 ನವೆಂಬರ್ 2020 (12:59 IST)
ಪುಣೆ : 7 ಮತ್ತು 8 ವರ್ಷದ ಅಪ್ರಾಪ್ತ ಬಾಲಕರಿಬ್ಬರಿಗೆ 13 ವರ್ಷದ ಹುಡುಗನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ.

ಹುಡುಗ ಬಾಲಕರಿಬ್ಬರನ್ನು ಆಟವಾಡಲು ಕರೆದಿದ್ದಾನೆ. ಆ ವೇಳೆ ಅವರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಇದನ್ನು ನೋಡಿದ ಸ್ಥಳೀಯರೊಬ್ಬರು ಸಂತ್ರಸ್ತ ಬಾಲಕನೊಬ್ಬನ ಪೋಷಕರಿಗೆ ತಿಳಿಸಿದ್ದಾರೆ. ಹಾಗೇ ಮತ್ತೊಬ್ಬ ಬಾಲಕ ತನ್ನ ಪೋಷಕರ ಬಳಿ ವಿಚಾರ ತಿಳಿಸಿದ್ದಾನೆ.

ಈ ಬಗ್ಗೆ ಇಬ್ಬರು ಬಾಲಕನ ಪೋಷಕರು ಠಾಣೆಗೆ ತೆರಳಿ ಹುಡುಗನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನ ಹೆತ್ತವರ ಬಳಿ ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯನ್ನು ಅಪಹರಿಸಿ ಮಾನಭಂಗ ಎಸಗಿ ಕೊಲೆ ಮಾಡಿದ ನೀಚರು