Publish Date: Wed, 03 Apr 2019 (16:45 IST)
Updated Date: Wed, 03 Apr 2019 (16:49 IST)
ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಟೈಂ ಬಾಂಬ್ ಫಿಕ್ಸ್ ಮಾಡಲಾಗಿದೆಯಂತೆ.
ಮೇ 23 ರಂದು ಟೈಂ ಬಾಂಬ್ ಸ್ಫೋಟಗೊಳ್ಳಲಿದೆ. ಹೀಗಂತ ಸುದ್ದಿಗಳು ಬಲವಾಗಿ ಹರಿದಾಡಲಾರಂಭಿಸಿವೆ.
ಹೆಚ್.ಡಿ.ಕುಮಾರಸ್ವಾಮಿ ನೆಗದ್ ಬಿದ್ದು ಹೋಗ್ತಾರೆ ಎಂಬ ಈಶ್ವರಪ್ಪ ಹೇಳಿಕೆಗೆ ಬಿಜೆಪಿ ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ನೆಗದ್ ಬಿದ್ದು ಹೋಗ್ತಾರೆ ಅಂತ ಹೇಳಲ್ಲ. ಹಾಗೇ ನಾವು ಬಯಸೋದೂ ಇಲ್ಲ. ಕುಮಾರಸ್ವಾಮಿಗೆ ಟೈಂಬಾಂಬ್ ಫಿಕ್ಸ್ ಆಗಿದೆ. ಮೇ 23ಕ್ಕೆ ಡೆಡ್ ಲೈನ್ ಇದೆ. ಸಿದ್ದರಾಮಯ್ಯ ಅವರೇ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ ಅಂತ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಅವರೇ ಡೆಡ್ ಲೈನ್ ಕೊಟ್ಟಿದ್ದಾರೆ, ನೋಡ್ತಾ ಇರಿ. ಅವರೇ ನೆಗೆದು ಬೀಳಬೇಕು ಅಂತಾ ಬಯಸಲ್ಲ. ಈಶ್ವರಪ್ಪ ರಾಜಕೀಯ ಪರಿಭಾಷೆಯಲ್ಲಿ ಹೇಳಿದ್ದಾರೆ ಅಷ್ಟೇ ಎಂದು ರವಿ ಹೇಳಿದ್ದಾರೆ.