Select Your Language

Notifications

webdunia
webdunia
webdunia
webdunia

ಲೋಕ ಆದ್ಮೇಲೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುತ್ತಂತೆ!

ಲೋಕ ಆದ್ಮೇಲೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುತ್ತಂತೆ!
ಬೆಂಗಳೂರು , ಭಾನುವಾರ, 14 ಏಪ್ರಿಲ್ 2019 (18:13 IST)
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ 22 ಸೀಟು ಗೆಲ್ಲುತ್ತದೆ. ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರ್ಕಾರ ಉರುಳಿ ಮಧ್ಯಂತರ ಚುನಾವಣೆ ನಡೆಯುತ್ತದೆ. ಹೀಗಂತ ಬಿಜೆಪಿ ಮುಖಂಡ ಭವಿಷ್ಯ ನುಡಿದಿದ್ದಾರೆ.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಈ ಹೇಳಿಕೆ ನೀಡಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ವರದಿಗಾರರ ಕೂಟ ಅಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮೋದಿ ಸರ್ಕಾರದ ಪರವಾದ ಅಲೆಯಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರದ ವಿರೋಧಿ ಅಲೆಯಿದೆ. ಹೀಗಾಗಿ ನಿಶ್ಚಿತವಾಗಿ ಬಿಜೆಪಿಗೆ ಲಾಭವಾಗಲಿದೆ ಎಂದರು.

webdunia
ಬಿಜೆಪಿಯ ಗೆಲುವಿಗೆ ಕುಮಾರಸ್ವಾಮಿ ನೇತೃತ್ವದ ಸರ್ಕಾರವೂ ಕೊಡುಗೆ ಕೊಡುತ್ತಿದೆ. ಯಾಕೆಂದರೆ ಸರ್ಕಾರ ರಚನೆಯಾಗಿ ಇಷ್ಟು ಕಾಲ ಕಳೆದರೂ ಮೈತ್ರಿಕೂಟದ ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಕಚ್ಚಾಟ ನಡೆದೇ ಇದೆ ಎಂದರು.

ಇದರ ಫಲವಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆಲ್ಲುತ್ತದೆ. ಕುಮಾರಸ್ವಾಮಿ ಸರ್ಕಾರ ಪತನವಾಗಿ ಚುನಾವಣೆ ಎದುರಾಗುತ್ತದೆ ಎಂದು ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಉಚ್ಛಾಟನೆಗೆ ಆಗ್ರಹ