ವಿಜಯಪುರ/ಕಲಬುರಗಿ: ಮುಸ್ಲಿಂ ಯುವತಿಯರನ್ನ ಮದುವೆಯಾದ್ರೆ ₹5ಲಕ್ಷ ನೀಡಲಾಗುವುದು ಎಂದು ವಿವಾದಾತ್ಮಕ ಹೇಳಿಕೆ ಸಂಬಂಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ.
ಹೇಳಿಕೆ ಸಂಬಂಧ ಯತ್ನಾಳ್ ವಿರುದ್ಧ ವಿಜಯಪುರ ಹಾಗೂ ಕಲಬುರಗಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಯತ್ನಾಳ್ ಹೇಳಿಕೆ ಹೀಗಿತ್ತು:
ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ ಹಿಂದೂ ಯುವಕರು ಮದುವೆಯಾದಲ್ಲಿ ಅವರಿಗೆ ₹5ಲಕ್ಷ ನೀಡುವುದಾಗಿ ಘೋಷಣೆ ಮಾಡಿದ್ದರು. ಕೊಪ್ಪಳದಲ್ಲಿ ಈ ರೀತಿ ಹೇಳಿಕೆ ನೀಡಿದ್ದ ಶಾಸಕರ ವಿರುದ್ಧ ವಿಜಯಪುರ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಮೈನುದ್ದೀನ ಬೀಳಗಿ ದೂರು ನೀಡಿದ್ದರು.
ಧರ್ಮದ ವಿರುದ್ಧ ಅವಹೇಳನ ಹಾಗೂ ಪ್ರಚೋದನಕಾರಿ ಹೇಳಿಕೆ ಖಂಡಿಸಿ ಬೀಳಗಿ ಕೇಸ್ ನೀಡಿದ್ದಾರೆ. ಈ ದೂರನ್ನು ಗುರುವಾರ ಕೊಪ್ಪಳಕ್ಕೆ ವರ್ಗಾಯಿಸಲಾಗಿದೆ. ಇದರ ಜೊತೆಗೆ ಯತ್ನಾಳ್ ಮೇಲೆ ಕಲಬುರ್ಗಿಯಲ್ಲೂ ದೂರು ದಾಖಲಾಗಿದ್ದು, ಅದನ್ನ ವಿಜಯಪುರ ಗಾಂಧಿಚೌಕ್ ಪೊಲಿಸ್ ಠಾಣೆಗೆ ಕಳಿಸಲಾಗಿದೆ. ಈ ದೂರನ್ನು ಕೂಡ ಕೊಪ್ಪಳಕ್ಕೆ ಕಳಿಸುವ ಸಾಧ್ಯತೆ ಇದೆ.