Publish Date: Thu, 05 Oct 2017 (11:17 IST)
Updated Date: Thu, 05 Oct 2017 (11:19 IST)
ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರ ಮೈಸೂರಿಗೆ ಅತೀ ಹೆಚ್ಚು ಅನುದಾನ ನೀಡಿದವನು ನಾನೇ ಎಂದು ಕೊಚ್ಚಿಕೊಳ್ಳುವ ಸಿಎಂ ಸಿದ್ದರಾಮಯ್ಯ ಕೊಟ್ಟದ್ದಕ್ಕಿಂತ ಹೆಚ್ಚು ಕಿಕ್ ಬ್ಯಾಕ್ ಪಡೆದವರೂ ಸಿದ್ದರಾಮಯ್ಯ ಎಂದು ಮಾಜಿ ಸಂಸದ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಕುರುಬ ಸಮಾಜದವರು ಯಾರೂ ಮಾಜಿ ಸಂಸದ ಎಚ್. ವಿಶ್ವನಾಥ್ ಗೆ ಮತ ಹಾಕಬಾರದು ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿದ ವಿಶ್ವನಾಥ್ ಸಿಎಂ ವಿರುದ್ಧ ಏಕವಚನದ ಪ್ರಯೋಗ ನಡೆಸಿದ್ದಾರೆ. ಕುರುಬ ಸಮಾಜಕ್ಕೆ ತಾನೊಬ್ಬನೇ ನಾಯಕ ಎಂದು ಮೆರೆಯುತ್ತಿರುವ ಸಿದ್ದರಾಮಯ್ಯಗೆ ಮುಂದಿನ ಚುನಾವಣೆಯಲ್ಲಿ ಕುರುಬ ಸಮುದಾಯದವರೇ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿರುವ ವಿಶ್ವನಾಥ್, ಸಿಎಂ ಸಿದ್ದರಾಮಯ್ಯ ತಮಗೆ ಉಪಕಾರ ಮಾಡಿದವರನ್ನು ಸ್ಮರಿಸುವ ಗುಣವಿಲ್ಲದವರು ಎಂದು ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ