ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಅಯ್ಯಂಗಾರ್ ಆರೋಪ ಮಾಡಿದ್ದಾರೆ.ನಗರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು ಮಲ್ಲೇಶ್ವರ ಕ್ಷೇತ್ರದಲ್ಲಿ ದೌರ್ಜನ್ಯ ನಡೆಯುತ್ತಿದೆ.ಸ್ಯಾಂಕಿ ಫ್ಲೈ ಓವರ್ ಬೇಡ ಅಂತ ಕಳೆದ ತಿಂಗಳು ಪ್ರತಿಭಟನೆ ನಡೆಸಿದ್ವಿ. ಪ್ರತಿಭಟನೆ ನಡೆಸಿದ ಎಲ್ಲರ ಮೇಲೆ ಕ್ರಿಮಿನಲ್ ಕೇಸ್ ಹಾಕಿಸಿದ್ದಾರೆ.ಬಿಜೆಪಿಯವರು ಹುಚ್ವುಚ್ಚಾಗಿ ಕೇಸ್ ಹಾಕಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಇನ್ನೂ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ ಬಾಯಿಗೆ ಬಟ್ಟೆ ಕಟ್ಟಿಕೊಂಡು ಕೂತಿದ್ದೇವೆ.ರಾಜ್ಯದಲ್ಲಿ ಯುಪಿ ಮಾಡೆಲ್ ಆಫ್ ಡೆವಲಪ್ಮೆಂಟ್ ಬರ್ತಾ ಇದೆ.ಯುಪಿ ಮಾಡೆಲ್ ಈಗ ಬಂದಿದೆ.ಸರ್ಕಾರದ ವಿರುದ್ದ ಏನೂ ಮಾತನಾಡಬಾರದು,ಪ್ರಶ್ನೆ ಕೇಳಬಾರದು.ಪ್ರಶ್ನೆ ಮಾಡಿದರೆ ರಾಜಕೀಯವಾಗಿ ಮುಗಿಸುತ್ತೇವೆ ಅಂತ ಸಚಿವ ಅಶ್ವತ್ಥ ನಾರಾಯಣ ಮೂಲಕ ಮೆಸೇಜ್ ಪಾಸ್ ಮಾಡಿದ್ದಾರೆ.೬೦-೭೦ ಜನರ ಮೇಲೆ ಎಫ್ ಐ ಆರ್ ಮಾಡಿದ್ದಾರೆ ಎಂದು ಎಂದು ಸಚಿವ ಅಶ್ವತ್ಥ ನಾರಾಯಣ್ ವಿರುದ್ದ ವಾಗ್ದಾಳಿ ನಡೆಸಿದರು.