Select Your Language

Notifications

webdunia
webdunia
webdunia
webdunia

ಯೋಗಸೆಂಟರ್ ಗಾಗಿ ಮರಗಳ ಮಾರಣಹೋಮ

ಯೋಗಸೆಂಟರ್ ಗಾಗಿ ಮರಗಳ ಮಾರಣಹೋಮ
bangalore , ಶನಿವಾರ, 28 ಮೇ 2022 (20:28 IST)
tree
ರಾಜಧಾನಿಯ ಆ ಕೆರೆಯನ್ನ ಈಗಾಗಲೇ ಒತ್ತುವರಿ ಮಾಡಿಕೊಂಡು, ಕೆರೆಯ ಜಾಗವೇ ಇಲ್ಲದಂತೆ ಮಾಡಲಾಗಿದೆ. ಇನ್ನು ಆ ಕೆರೆ ಜಾಗದ ಒಳಗೆ ಬಿಬಿಎಂಪಿ ಯೋಗಸೆಂಟರ್ ಮಾಡಲು ಹೊರಟಿದದ್ದು, 15 ಕ್ಕೂ ಹೆಚ್ಚು ಮರಗಳನ್ನ ಕಡಿಯಲಾಗಿದೆ. ಕೆರೆಯ ಜಾಗದಲ್ಲಿ ಯಾಕಪ್ಪಾ ಯೋಗಸೆಂಟರ್ ಅಂತಾ ಅಲ್ಲಿನ ಸ್ಥಳೀಯರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.ಹೀಗೆ ಕತ್ತರಿಸಿ ಬಿಸಾಕಿರೋ ಮರದ ದಿಣ್ಣೆಗಳು,,, ರೆಂಬೆ, ಕೊಂಬೆಗಳು... ಮಾರ್ಕ್ ಮಾಡಿರೋ ಯೋಗ ಸೆಂಟರ್ ಜಾಗ... ಮತ್ತೊಂದು ಕಡೆ ಸ್ವಚ್ಛಂದವಾಗಿ ಹಾರಾಡ್ತಿರೋ ಪಕ್ಷಿಗಳು.‌ ಇನ್ನೊಂದು ಕಡೆ ಸುಂದರವಾಗಿ ಕಾಣಿಸ್ತಿರೋ ಕೆರೆ. ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು, ರಾಜರಾಜೇಶ್ವರಿನಗರದ ನಗರದ ವಡ್ಡರಹಳ್ಳಿ ಕೆರೆಯ ಬಳಿ.‌ ಈ ಕೆರೆ ಒಳಗಿನ ಜಾಗದಲ್ಲಿ ಯೋಗಸೆಂಟರ್ ನಿರ್ಮಾಣ ಮಾಡ್ಬೇಕು ಅಂತಾ ಹೀಗಡ ಮರಗಳನ್ನು ಕಡಿದು ಹಾಕಿ, ಜಾಗ ಮಾರ್ಕ್ ಮಾಡಿ ಹೋಗಲಾಗಿದೆ.‌ ಇದು ಈಗ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕರೆಯನ್ನು ಈಗಾಗಲೇ ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ ಅನ್ನೋ ಆರೋಪ ಇದೆ. ಹೀಗಾಗೀ ಕೆರೆ ಜಾಗ ಕ್ಷೀಣಿಸಿದ್ದು, ಪಕ್ಷಿ-ಪ್ರಾಣಿ ಸಂಕುಲ ನಾಶವಾಗಿದೆ. ಇದ್ರ ನಡುವೆ ಈಗ ಪಾಲಿಕೆ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದು, ಕೆರೆ ಜಾಗದಲ್ಲಿ ಯೋಗಸೆಂಟರ್ ನಿರ್ಮಾಣ ಮಾಡೋಕೆ ಹೊರಟಿದೆ. ಈ ಕೆರೆಯ ಜಾಗದಲ್ಲಿ ವಾಕಿಂಗ್ ಮಾಡಿದ್ರೆ ಸಾಕು,, ಅದೇ ಯೋಗ ಆಗುತ್ತೆ. ಮತ್ಯಾಕೆ ಯೋಗಸೆಂಟರ್ ಬೇಕು ಅನ್ನೋದು ಸ್ಥಳೀಯರ ಆಕ್ಷೇಪ. ಇನ್ನು ಒಂದು ಮರ ಬೆಳೆಸೋದು ಎಷ್ಟು ಕಷ್ಟ. ಅಂತದ್ರಲ್ಲಿ ಸ್ಥಳೀಯರು ಬಹುದಿನಗಳಿಂದ ಬೆಳೆಸಿರೋ ಮರಗಳನ್ನು ಜೆಸಿಬಿ ತಂದು ಕ್ಷಣಾರ್ಧದಲ್ಲಿ ನಾಶ ಮಾಡ್ತಾರೆ ಅಂದ್ರೆ ಇವರಿಗೆ ಏನ್ ಹೇಳ್ಬೇಕು ಅಂತಾ ಸ್ಥಳೀಯರು ಕಿಡಿಕಾರುತ್ತಿದ್ದಾರೆ.‌ಯೋಗ ಸೆಂಟರ್ ಮಾಡ್ಲೇಬೇಕು ಅಂತಾ ಇದ್ರೆ, ಬೇರೆ ಕಡೆ ಜಾಗ ಗುರುತು ಮಾಡಿ ಮಾಡ್ಲಿ..‌ ಕೆರೆ ಜಾಗದಲ್ಲಿ ಬೇಡ ಅನ್ನೋದು ಸ್ಥಳೀಯರು ಹಾಗೂ ಪರಿಸರವಾದಿಗಳ ಆಗ್ರಹ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಯು ಕೋರ್ಸ್ ಗೆ ಹೆಚ್ಚಿದ ಡಿಮ್ಯಾಂಡ್