Select Your Language

Notifications

webdunia
webdunia
webdunia
webdunia

ಪಿಯು ಕೋರ್ಸ್ ಗೆ ಹೆಚ್ಚಿದ ಡಿಮ್ಯಾಂಡ್

ಪಿಯು ಕೋರ್ಸ್ ಗೆ ಹೆಚ್ಚಿದ ಡಿಮ್ಯಾಂಡ್
bangalore , ಶನಿವಾರ, 28 ಮೇ 2022 (20:23 IST)
ಕಳೆದ ನಾಲ್ಕು ದಿನಗಳ ಹಿಂದೆ ಎಸ್ ಎಸ್ ಎಲ್ ಸಿ ಪರೀಕ್ಷೆ  ಮುಗಿದಿದ್ದು ,ಬಹುತೇಕ ವಿದ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ಪಾಸ್ ಆಗಿದ್ರು .ಇನ್ನು  ರಾಜಧಾನಿ ಸೇರಿದಂತೆ ರಾಜ್ಯದ್ಯಂತ ಈ ಬಾರಿ ಉತ್ತಮ ಫಲಿತಾಂಶ ಹೊರಬಿದ್ದಿದೆ. ಹೀಗಾಗಿ ಪಿಯು ಪ್ರವೇಶಕ್ಕೆ ಬಾರಿ ಬೇಡಿಕೆ ಶುರುವಾಗಿದೆ.ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದ ನಂತರ ಪಿಯು ಕಾಲೇಜ್ ಗೆ ವಿದ್ಯಾರ್ಥಿಗಳು ಆಡ್ಮೀಷನ್ ಆಗ್ತಾರೆ. ಹಾಗಾಗಿ ಪ್ರತಿಷ್ಠಿತ ಕಾಲೇಜ್ ಆಯ್ಕೆ ಮಾಡಿಕೊಳ್ಳಲು ಮುಂದಾಗ್ತಾರೆ. ತಮ್ಮಗೆ ಇಷ್ಟವಾದ ಕಾಲೇಜ್ ಗೆ ಆಫ್ಲೀಕೇಷನ್ ಹಾಕುವ ಕೆಲಸವನ್ನ ಕೂಡ ಮಾಡ್ತಾರೆ. ಆದ್ರೆ ಕೆಲವರಿಗೆ ಸುಲಭವಾಗಿ ಸೀಟ್ ಸಿಗುತ್ತೆ. ಮತ್ತೆ ಕೆಲವರಿಗೆ ಸೀಟ್ ಸಿಗುವುದು ಕಷ್ಟವಾಗುತ್ತೆ. ಆದ್ರೆ ಈ ಬಾರಿ ಶೇ. 85.63%  ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿಯಲ್ಲಿ ಪಾಸ್ ಆಗಿದ್ದಾರೆ.ಜೊತೆಗೆ ಈ ಸಲದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಔಟ್ ಆಫ್ ಔಟ್ 625 ಅಂಕಕ್ಕೆ 625 ಅಂಕವನ್ನ 145 ಮಕ್ಕಳು ಪಡೆದುಕೊಂಡಿದ್ದಾರೆ.ಹೀಗೆ ಉತ್ತಮ ರ್ಯಾಕ್ ಪಡೆದು ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಹೀಗಾಗಿ ಸೀಟ್ ಸಿಗುವುದು ಎಲ್ಲಿ ಕಷ್ಟವಾಗುತ್ತೋಯೆಂದು  ವಿದ್ಯಾರ್ಥಿಗಳಿಗೆ, ಪೋಷಕರಿಗೆ ಆತಂಕ ಶುರುವಾಗಿದೆ.
ಕಾಲೇಜ್ ನಲ್ಲಿ ಈಗ ಸೀಟ್ ಸಿಗುವುದೇ ಕಷ್ಟವಾಗೋಗಿದೆ ಅಂತಾ ವಿದ್ಯಾರ್ಥಿಗಳು ಒಂದು ಕಡೆ ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೊಂದು ಕಡೆ ಈಗ ಯಾರು ಆತಂಕಕ್ಕೆ ಒಳಗಾಗುವುದು ಬೇಡ ಈ ಬಾರಿ ಪಾಸ್  ಆದ 6 ಲಕ್ಷ ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತೆ. ಅವಶ್ಯಕತೆ ಇರುವ ಕಡೆ ಕಾಲೇಜ್ ಓಪನ್ ಮಾಡ್ತೇವೆ ಅಂತಾ ಸ್ವತಃ ಶಿಕ್ಷಣ ಸಚಿವರೇ ಹೇಳ್ತಿದ್ದಾರೆ. ಆದರ ಜೊತೆಗೆ  ರಾಜ್ಯದಲ್ಲಿ 50 ಕಾಲೇಜ್ ಓಪನ್ ಮಾಡುವ ಚಿಂತನೆಯಲ್ಲಿ ಶಿಕ್ಷಣ ಇಲಾಖೆ ಇದೆ. ಆದ್ರೆ ಯಾವ ಮಕ್ಕಳಿಗೂ ತೊಂದರೆಯಾಗಲ್ಲ ಪ್ರತಿಯೊಬ್ಬರು ಸೀಟ್ ಆಗುತ್ತೆ ಅನ್ನುವ ಭರವಸೆಯನ್ನ ಶಿಕ್ಷಣ ಸಚಿವರು ಕೊಟ್ಟಿದ್ದಾರೆ.ಆದ್ರೆ ಕಾಲೇಜ್ ಕಟ್ಟುವುದು ಅಷ್ಟು ಸುಲಭನ್ನ , ಬಾಯಲ್ಲಿ ಹೇಳಿದಂತೆ ಸುಲಭವಾಗಿ ಕಟ್ಟಬಹುದಾ? ಶಿಕ್ಷಣ ಸಚಿವರ ಈ ಮಾತು ಸಾಮಾಧಾನದ ಮಾತಾ? ಅಥವಾ ನಿಜಕ್ಕೂ ಕಾಲೇಜ್ ಕಟ್ತಾರಾ? ಆ ಭಗವಂತನ್ನೇ ಬಲ್ಲ.ದಿನದಿಂದ ದಿನಕ್ಕೆ ಕಾಲೇಜ್ ಗೆ ಆಡ್ಮೀಷನ್ ಆಗುವ ಪ್ರಕ್ರಿಯೆ ಹೆಚ್ಚಾಗ್ತಿದೆ.ಇತ್ತ ಶಿಕ್ಷಣ ಸಚಿವರು ಪ್ರತಿಯೊಬ್ಬರಿಗೂ ಸೀಟ್ ಸಿಗುತ್ತೆ ಅಂತಾ ಆಶ್ವಾಸನೆ ನೀಡ್ತಿದ್ದಾರೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ಸೀಟ್ ಸಿಗದಿದ್ರೆ ಹೊಸ ಕಾಲೇಜ್ ಓಪನ್ ಮಾಡ್ತಾರಂತೆ, ಇನ್ನು ಶಿಕ್ಷಣ ಸಚಿವರು ಕಾಲೇಜ್ ಓಪನ್ ಮಾಡುವುದು ಯಾವಾಗ?  ವಿದ್ಯಾರ್ಥಿಗಳಿಗೆ ಸೀಟ್ ಸಿಗುವುದು ಯಾವಾಗ? ಒಟ್ನಲಿ  ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಶಿಕ್ಷಣ ಸಚಿವರು  ಹೇಳ್ತಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

PSI ಮರು ಪರೀಕ್ಷೆ ನಿರ್ಧಾರ ವಿರೋಧಿಸಿ ಆಭ್ಯರ್ಥಿಗಳಿಂದ ಪ್ರತಿಭಟನೆ