Select Your Language

Notifications

webdunia
webdunia
webdunia
webdunia

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕವನ್ನು ಪಡೆದು ತೇರ್ಗಡೆಯಾದ 10 ವಿದ್ಯಾರ್ಥಿಗಳಿಗೆ ಸನ್ಮಾನ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕವನ್ನು ಪಡೆದು ತೇರ್ಗಡೆಯಾದ 10 ವಿದ್ಯಾರ್ಥಿಗಳಿಗೆ ಸನ್ಮಾನ
bangalore , ಶನಿವಾರ, 28 ಮೇ 2022 (20:12 IST)
students
ದುಗ್ಗಾವತಿ ಗ್ರಾಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕವನ್ನು ಪಡೆದು ತೇರ್ಗಡೆಯಾದ 10 ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ನಾಯಕಿ ಶ್ರೀಮತಿ ಎಂ ಪಿ ವೀಣಾ ಮಹಾಂತೇಶ್
 
ಅನ್ಯಾಯಗಳ ವಿರುದ್ಧ ಹೋರಾಟ ಮಾಡಬೇಕಾದರೆ ಶಿಕ್ಷಣವೆಂಬ ಹುಲಿಯ ಹಾಲನ್ನು ಕುಡಿಯಲೇಬೇಕು ಎಂಬ ಡಾ. ಬಿ. ಆರ್. ಅಂಬೇಡ್ಕರ್ ಅವರ ನುಡಿಯಂತೆ ದುಗ್ಗಾವತಿಯಲ್ಲಿ ಜೀವನದ ಪ್ರಮುಖ ಘಟ್ಟವಾದ ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತಮ ಅಂಕಗಳನ್ನು ಪಡೆದ ಮುಗ್ದ ವಿದ್ಯಾರ್ಥಿಗಳಿಗೆ ಎಂ. ಪಿ. ವೀಣಾ ಮಹಾಂತೇಶ್ ಅವರು ಸನ್ಮಾನವನ್ನು ಮಾಡಿ ಅ ಮಕ್ಕಳಿಗೆ ಶುಭ ಹಾರೈಸಿದರು.
ಆಗೆಯೇ ಕನ್ನಡ ವಿಷಯದಲ್ಲಿ 125 ಕ್ಕೆ 121 ಕ್ಕೂ ಹೆಚ್ಚು ಅಂಕ ಗಳಿಸಿ" ಕನ್ನಡ ರತ್ನ ಪ್ರಶಸ್ತಿ"ಗೆ ಭಾಜನರಾದ ವಿದ್ಯಾರ್ಥಿಗಳನ್ನು ಕೂಡ ಕ್ಷೇತ್ರದ ದಣಿವಿಲ್ಲದ ಜನನಾಯಕಿ ಎಂ. ಪಿ. ವೀಣಕ್ಕಾ ಅವರು ಗೌರವ ಸನ್ಮಾನದಿಂದ ಶುಭಕೋರಿದರು.
ಶಿಕ್ಷಣ ಕೇವಲ ಬದುಕಲು ಅಲ್ಲ ಶಿಕ್ಷಣ ಗೆಲುವುದನ್ನು ಕಲಿಸುತ್ತದೆ.ಶಿಕ್ಷಣ ಸೋಲಿನೊಂದಿಗೆ ಸಮಾಜದ ಜನರ ನಡುವೆ ಬದುಕುವುದನ್ನು ಕಲಿಸುತ್ತದೆ.ನಾವು ಪಡೆದ ಶಿಕ್ಷಣ ಕೇವಲ ಸಂಪಾದನೆಯ ಮಾರ್ಗವಾಗಿರದೆ ಸಮಾಜದ ಮಾರ್ಗದಲ್ಲಿಯೂ ನಡೆಯಬೇಕು ಶಿಕ್ಷಣ ಜೀವನಕ್ಕಾಗಿ ಜೀವನ ರಾಷ್ಟ್ರಕ್ಕಾಗಿ ಎಂಬ ನುಡಿಗಳನ್ನು ಎಂ. ಪಿ. ವೀಣಾ ಮಹಾಂತೇಶ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ಪ್ರಪಂಚವನ್ನು ಬದಲಾಯಿಸಲು ಬಳಸಬಹುದಾದ ಅತೀ ಪ್ರಬಲ ಅಸ್ತ್ರವೆಂದರೆ ಅದುವೇ ಶಿಕ್ಷಣ ಎಂದು ತಿಳಿಸಿದರು. ಮುಂದಿನ ಎಲ್ಲ ವಿದ್ಯಾರ್ಥಿ ಗಳ ಜೀವನ ಸದಾ ಸಾಧನೆಯತ್ತ ಸಾಗಲಿ ಭವಿಷ್ಯದಲ್ಲಿ ಉತ್ತಮ ನಾಯಕರು ನೀವು ಆಗಬೇಕು ಎಂದು ಮನ ತುಂಬಿ ಹಾರೈಸಿದರು.
 
ಈ ಸಂದರ್ಭದಲ್ಲಿ  ದೀಪಾ, ಪೃಥ್ವಿ,ಯಶವಂತ್, ನಾಗರತ್ನ, S ನೇತ್ರಾವತಿ,R.G.ಗುರುರಾಜ್,A ಹಾಲೇಶ್, H. ಕಾದಂಬರಿ,M. K. ಅರ್ಚನಾ, K.ಜಯಶೀಲಾ ಈ ವಿದ್ಯಾರ್ಥಿ ಗಳನ್ನು ಸನ್ಮಾನಿಸಿದರು. 
 
ಈ ಸುಸಂದರ್ಭದಲ್ಲಿ ಕಾಂಗ್ರೆಸ್ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ತಳವಾರ್ ಸಿದ್ದಮ್ಮ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಹಲವಾಗಲು ರೇಣುಕಮ್ಮ  ಸದಸ್ಯರುಗಳಾದ ಶ್ರೀಮತಿ ಅನ್ನಮ್ಮ ಶ್ರೀಮತಿ ಬಸಮ್ಮ ಸುರೇಶ್ 
ಮುಖಂಡರಾದ ಸುರೇಶ್ ಹರಣಿ ಕೊಟ್ರೇಶ್ ಎಸ್ಡಿಎಂಸಿ ಉಪಾಧ್ಯಕ್ಷರು ಚಮನ್ ಶರೀಫ್ ಗೋಣೆಪ್ಪ ಮಹೇಶ್ ಗೋಣಿವರ ಚಂದ್ರಪ್ಪ ಹಲುವಾಗಲು ಮಲ್ಲಿಕಾರ್ಜುನಪ್ಪ ಮತ್ತು ಗ್ರಾಮದ ಮಹಿಳೆಯರು,ಮುಖಂಡರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯಾದಿಂದ 1000 ಕಿ.ಮೀ. ಚಿಮ್ಮುವ ಹೈಪರ್‌ ಸಾನಿಕ್‌ ಯಶಸ್ವಿ ಪರೀಕ್ಷೆ!