Publish Date: Fri, 17 Mar 2023 (21:00 IST)
Updated Date: Fri, 17 Mar 2023 (21:32 IST)
ಸಚಿವ ಮಾಧುಸ್ವಾಮಿ ವಿರುದ್ಧ ಮಾಜಿ ಶಾಸಕ ಕಿರಣ್ ಕುಮಾರ್ ಕಿಡಿಕಾರಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ನೀರಾವರಿ ಹರಿಕಾರ ಎನ್ನುವವರು ಆತ್ಮಾವಲೋಕನ ಮಾಡಿಕೊಳ್ಳಲಿ. ಅವರು ಹೇಳೋದೊಂದು, ಮಾಡೋದೊಂದು. ಅವರು ಏನ್ ಮಾಡ್ತಾರೋ ಅದನ್ನ ಹೇಳಲ್ಲ.. ಏನ್ ಹೇಳ್ತಾರೋ ಅದನ್ನ ಮಾಡಲ್ಲ ಎಂದು ಕಿಡಿಕಾರಿದ್ದಾರೆ.. ಈಗ ಅವರು ಮಾಡ್ತಿರೋದು ಪೈಪ್ಲೈನ್ ಕಾಮಗಾರಿ.. ಹೆಚ್ಚು ಕಮಿಷನ್ ಸಿಗುತ್ತೆ ಅಂತಾ ಮಾಡ್ತಿದ್ದಾರೆ.. ಅವರಿಗೆ ಕೆಲವು ಕಡೆ ಬೂತ್ ಏಜೆಂಟ್ ಸಿಗ್ತಾರೋ ಇಲ್ವೋ ಗೊತ್ತಿಲ್ಲ ಎಂದು ಕಿರಣ್ ಕುಮಾರ್ ವಾಗ್ದಾಳಿ ನಡೆಸಿದ್ರು.