Select Your Language

Notifications

webdunia
webdunia
webdunia
webdunia

ಭವಾನಿ ವಿರುದ್ಧ ಶಾಸಕ ಪ್ರೀತಂ ಗೌಡ ಕಿಡಿ

ಭವಾನಿ ವಿರುದ್ಧ ಶಾಸಕ ಪ್ರೀತಂ ಗೌಡ ಕಿಡಿBhavani vs MLA Pritam Gowda
ಹಾಸನ , ಶುಕ್ರವಾರ, 28 ಏಪ್ರಿಲ್ 2023 (17:00 IST)
ಹಾಸನದಲ್ಲಿ JDS ಕ್ಯಾಂಡಿಡೇಟ್ ಯಾರು, ಅವರ ಹೆಸರು ಗೊತ್ತಿಲ್ಲ ಅಂತಾ ಹೇಳಿದ್ದವರು ಇದೀಗ ಹಾಸನ ಜೆಡಿಎಸ್​​​ ಅಭ್ಯರ್ಥಿ ಸ್ವರೂಪ್​​​ ಪ್ರಕಾಶ್​​ ನನ್ನ ಮಗ ಎಂದು ಹೇಳ್ತಿದ್ದಾರೆ ಎಂದು ಭವಾನಿ ರೇವಣ್ಣ ವಿರುದ್ಧ ಶಾಸಕ ಪ್ರೀತಂ ಗೌಡ ಕಿಡಿಕಾರಿದ್ದಾರೆ.. ಹಾಸನದಲ್ಲಿ ಮಾತನಾಡಿದ ಅವರು, ಅವರಿಗೆ 2024ರ ಲೋಕಸಭಾ ಚುನಾವಣೆ ಫಲಿತಾಂಶದ ಜ್ಞಾಪಕ ಬಂದು ಈ ರೀತಿ ಹೇಳ್ತಿದ್ದಾರೆ.. 2024ಕ್ಕೆ ನಾವು ಉಳ್ಕೋಬೇಕು ಅಂದ್ರೆ ಏನಾದ್ರೂ ತಂತ್ರ ಮಾಡ್ಬೇಕಲ್ಲ ಅಂತಾ ಮಗ, ಅಮ್ಮ, ತಂದೆ, ತಾಯಿ ಎಲ್ಲಾ ಜ್ಞಾಪಕಕ್ಕೆ ಬರ್ತಾ ಇದ್ದಾರೆ ಎಂದು ಕಿಡಿಕಾರಿದ್ರು.. ಅವರಿಬ್ಬರೂ ಒಂದಾಗಿರುವುದು ಅವರ ಪಾರ್ಟಿಗೆ ಒಳ್ಳೆಯದು..ಅವರು ಅದೇ ರೀತಿ ಇದ್ದು ಪಾರ್ಟಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ.. ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇರಲೇಬೇಕು ಎಂದು ಭವಾನಿ ರೇವಣ್ಣ ವಿರುದ್ಧ ಪ್ರೀತಂ ಗೌಡ ತಿರುಗೇಟು ನೀಡಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್​​​​ ವಿರುದ್ದ ಪ್ರಧಾನಿ ಮೋದಿ ಕಿಡಿ