Select Your Language

Notifications

webdunia
webdunia
webdunia
webdunia

ಅನೈತಿಕ‌ ಸಂಬಂಧಕ್ಕೆ ಮಹಿಳೆಯ ಹತ್ಯೆ

Killing of a woman for an immoral relationship
bangalore , ಶುಕ್ರವಾರ, 28 ಏಪ್ರಿಲ್ 2023 (14:30 IST)
ಆಕೆ ಮೂವತ್ತೈದು ವರ್ಷದ ಮಹಿಳೆ.ಈತ 22 ವರ್ಷದ ತರುಣ.ಅಕ್ಕ ಪಕ್ಕದವರಿಗೆ ಅಕ್ಕ ಅಕ್ಕ ಅಂತಲೇ ಮನೆಗೆ ಕರೆಸಿಕೊಳ್ತಿದ್ದ.ಆದ್ರೆ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ್ಳು.ಆಸ್ಪತ್ರೆಯಲ್ಲಿ ಪೊಲೀಸರ ಮುಂದೆಯೂ ಇದೇ ಸಿಸ್ಟರ್ ಅನ್ನೋ ಡೈಲಾಗ್ ಹೊಡೆದಿದ್ದ‌‌.ಆದ್ರೆ ಪೊಲೀಸರು ತಮ್ಮದೇ ಸ್ಟೈಲ್ ನಲ್ಲಿ ವಿಚಾರಸಿದಾಗ ಭಯಾನಕ‌ಸತ್ಯ ಬಹಿರಂಗ ಗೊಂಡಿದೆ.ಸಾವಿನ ಹಿಂದಿನ ಸತ್ಯ ರಿವೀಲ್ ಆಗಿದೆ.

35 ವರ್ಷದ ಮಹಿಳೆ ಹೆಸರು ಸರಗುಣಂ ನೋಡೋಕೆ ಅಂತಾ ಸುಂದರಿ ಏನಲ್ಲ..22 ವರ್ಷದ ತರುಣನ ಹೆಸರು ಗಣೇಶ ಈತನೇನು ಸುರಸುಂದರಾಂಗ ಅಲ್ಲಾ.ಆದ್ರೂ ಕಣ್ ಕಣ್ಣ ಸಲುಗೆಯಲ್ಲೇ ಇಬ್ಬರ ಮಧ್ಯೆ ಪ್ರೀತಿ ಉಕ್ಕಿ ಹರಿದಿತ್ತು..ಗಂಡನಿಗೆ ಗೊತ್ತಾಗದಂತೆ ಆಗಾಗ ಇನಿಯನಿಗೆ ಸನಿಹ ಆಗ್ತಿದ್ಳು..ಆದ್ರೆ ಅದೇ ಸಲುಗೆ ಆಕೆಯ ಜೀವಕ್ಕೆ ಕೊಳ್ಳಿ ಇಟ್ಟಿದೆ.

ಸರಗುಣಂ ಗೆ ಮದುವೆಯಾಗಿದ್ದು 17 ವರ್ಷದ ಮಗನಿದ್ದಾನೆ..ಪತಿ ಕೂಲಿ ಕೆಲಸ ಮಾಡಿಕೊಂಡಿದ್ರೆ.ಈಕೆ ಮನೆಗೆಲಸ ಮಾಡಿಕೊಂಡಿದ್ದಳು..ಇನ್ನೂ ಪ್ರಿಯಕರ ಗಣೇಶ್ ಆಟೋ ಚಾಲಕನಾಗಿದ್ದ..ಕಳೆದ ನಾಲ್ಕು ವರ್ಷದ ಹಿಂದೆ ಒಂದೇ ಏರಿಯಾ ಎಂಜಿ ನಗರದಲ್ಲಿದ್ದಾಗ ಇಬ್ಬರ ಮಧ್ಯೆ ಪರಿಚಯವಾಗಿದೆ..ಪರಿಚಯ ಪ್ರೀತಿಯಾಗಿ ಅಕ್ರಮ ಸಂಬಂಧವರೆಗೆ ಬಂದಿತ್ತು..ಗಂಡನಿಗೆ ಗೊತ್ತಾಗದಂತೆ ಸರಸ ಸಲ್ಲಾಪ ನಡೀತಿತ್ತು..ಮನೆಗೆಲಸ ಮಾಡ್ತಿದ್ರು..ಪ್ರಿಯಕರನಿಗೆ ೫೦ ಸಾವಿರ ಹಣ ನೀಡಿದ್ಳು..ಬಸವೇಶ್ವರನಗರದ ಜೆಸಿ ನಗರದಲ್ಲಿ ಒಂದು ಬಾಡಿಗೆ ಮನೆಯನ್ನೂ ಮಾಡಿಕೊಟ್ಟಿದ್ಳು.ಆಗಾಗ ಇದೇ ಮನೆ ಬಂದು ಪ್ರಿಯತಮನ ಜೊತೆಗೆ ಏಕಾಂತದಲ್ಲಿ ಕಾಲ ಕಳಿತಿದ್ಳು.

ಹೀಗಿರಬೇಕಾದ್ರೆ ಇತ್ತೀಚೆಗೆ ಗಣೇಶ ಮತ್ತೋರ್ವಳ ಜೊತೆಗೆ ಸಂಪರ್ಕ ಬೆಳೆಸಿದ್ದ ಹಾಗಾಗಿ ಸರಗುಣಂ ನನ್ನ ಅವಾಯ್ಡ್ ಮಾಡೋಕೆ ಶುರು ಮಾಡಿದ್ದ ಇದೇ ವಿಚಾರವಾಗಿ  ಇಬ್ಬರ ಮಧ್ಯೆ ಆಗಾಗ ಗಲಾಟೆ ಕೂಡ ನಡೀತಿತ್ತು.ಅದೇ ರೀತಿ‌ ಏಪ್ರಿಲ್ 25 ರ ಸಂಜೆ 4 ಗಂಟೆಗೆ ಸರಗುಣಂ ಗಣೇಶನ ಇದೇ ಮನೆಗೆ ಬಂದಿದ್ದಳು.ನಾನೇ ಹಣಕೊಟ್ಟು, ಮನೆ ಮಾಡಿಕೊಟ್ಟು ನೋಡಿಕೊಳ್ತಿದ್ದೇನೆ.ಹಣ ವಾಪಸ್ ಕೊಡು ಇಲ್ಲದಿದ್ದರೆ ಗಂಡನನ್ನ ಬಿಟ್ಟು ಬರ್ತಿನಿ ಮದುವೆಯಾಗು ಅಂತಾ ಪೀಡಿಸತೊಡಗಿದ್ಳು.ಆಕೆಯ ಮಾತಿನಿಂದ ರೋಸಿಹೋಗಿದ್ದ ಗಣೇಶ..ಸಾಯೋದಾಗಿ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ.ಇದೇ ವೇಳೆ ತಾನು ಸಾಯ್ತೀನಿ ಅಂತ ಮಹಿಳೆ ನೇಣಿನ ಕುಣಿಕೆಗೆ ಕೊರಳೊಡ್ಡಿದ್ಳು.ಇದೇ ಸರಿಯಾದ ಸಮಯ ಎಂದು ಕೊಂಡವನು ಚೇರ್ ಎಳೆದುಬಿಟ್ಟಿದ್ದ.ಆಕೆ ಅಲ್ಲಿಯೇ ನೇತಾಡಿ ಉಸಿರು ಚೆಲ್ಲಿದ್ಳು.

ಮಹಿಳೆ ಸಾವಿನ ಬಳಿಕ ಆಕೆಯನ್ನ ತನ್ನ ಆಟೋ ದಲ್ಲಿ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ನನ್ನ ಅಕ್ಕ ನೇಣು ಹಾಕಿಕೊಂಡಿದ್ದಾಳೆ ಬದುಕಿಸಿ ಕೊಡಿ ಸರ್ ಎಂದು ಡ್ರಾಮಾ ಆಡಿದ್ದ. ಆದರೆ ಅಷ್ಟೊತ್ತಿಗಾಗಲೇ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು..ಇದು ಆತನಿಗೂ ಗೊತ್ತಿತ್ತು ಕೂಡ.ಅಷ್ಟೇ ಅಲ್ಲ ಪೊಲೀಸರ ಮುಂದೆಯೂ ಇದೇ ಡೈಲಾಗ್ ಹೊಡೆದಿದ್ದ‌..ಆದರೆ ಖಾಕಿ ತನಿಖೆಯ ಮುಂದೆ ಎಲ್ಲವೂ ಬಟಾಬಯಲಾಗಿದೆ..ಸದ್ಯ ಆರೋಪಿಯನ್ನ ಬಂಧಿಸಿರೊ ಬಸವೇಶ್ವರ ನಗರ ಪೊಲೀಸರು ಜೈಲಿಗಟ್ಟಿದ್ದಾರೆ.

ಅದೇನೆ ಹೇಳಿ..ಅಕ್ಕ ಅಕ್ಕ ಅಂತಾ ಹೇಳಿಕೊಂಡೆ ಅಕ್ರಮ ಸಂಬಂಧ ಇಟ್ಟುಕೊಂಡವನು ಜೈಲು ಪಾಲಾದ್ರೆ..ಗಂಡ ಮಕ್ಕಳಂತಾ ತುಂಬು ಸಂಸಾರ ಹೊಂದಿದ್ದ ಮಹಿಳೆ ಪಾಗಲ್ ಪ್ರೇಮಿಯ ಸಂಗ ಮಾಡಿ ಸಾವಿನ ಮನೆ ಸೇರಿದ್ದು ನಿಜಕ್ಕೂ ವಿಪರ್ಯಾಸ
 

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಶರತ್ ಬಚ್ಚೇಗೌಡ ತಾವರೆಕೆರೆ ಗ್ರಾಮ ಪಂಚಾಯತಿಯಲ್ಲಿ ಅಬ್ಬರದ ಪ್ರಚಾರ