ಉದ್ಯಮಿ ಗೌತಮ್ ಅದಾನಿಗೆ ಚೀನಾ ನಂಟಿದೆ. ಆದರೂ ಅವರಿಗೆ ಭಾರತದಾದ್ಯಂತ ಬಂದರುಗಳನ್ನು ನಿರ್ವಹಣೆ ಮಾಡಲು ಅವಕಾಶ ನೀಡಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, APM ಟರ್ಮಿನಲ್ಸ್ ಮ್ಯಾನೇಜ್‌ಮೆಂಟ್ ಮತ್ತು ತೈವಾನ್‌ನ ವಾನ್ ಹೈ ಲೈನ್ಸ್ ಪಾಲುದಾರಿಕೆಯ ಕಂಪನಿಯೊಂದಕ್ಕೆ ಭದ್ರತಾ ನಿರಾಕ್ಷೇಪಣಾ ಪತ್ರ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.. ವಾನ್ ಹೈನ ನಿರ್ದೇಶಕ ಮತ್ತು ಚೀನಾ ಕಂಪನಿಯೊಂದರ ನಂಟಿನ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಚೀನಾದ ಯಾವುದೇ ಸಂಸ್ಥೆಗಳು ಅಥವಾ ಚೀನಾ ನಂಟಿನ ಯಾವುದೇ ಕಂಪನಿಗಳಿಗೆ ಭಾರತದ ಬಂದರುಗಳ ನಿರ್ವಹಣೆ ನೀಡಬಾರದು ಎಂಬುದು ಸರ್ಕಾರದ ನೀತಿ.. ಇದೇ ಕಾರಣಕ್ಕಾಗಿ ಅದಾನಿ ಒಡೆತನದ ಕಂಪನಿಯೊಂದಕ್ಕೆ ಜವಾಹರ್‌ಲಾಲ್ ನೆಹರು ಬಂದರಿನ ನಿರ್ವಹಣೆ ಗುತ್ತಿಗೆ ನೀಡಿರಲಿಲ್ಲ. ಇದು ಚೀನಾ ಕಂಪನಿಗಳ ಜೊತೆ ಗೌತಮ್ ಅದಾನಿ ನಂಟನ್ನು ಸಾಬೀತುಪಡಿಸುತ್ತದೆ ಎಂದಿದ್ದಾರೆ.