ಕೋವಿಡ್ ಬೆನ್ನಲ್ಲೇ ಮತ್ತೊಂದು ಹೊಸ ವೈರಸ್ ಭೀತಿ ಶುರುವಾಗಿದೆ,ವೀದೇಶಗಳಲ್ಲಿ ಹರಡಿರುವ YELLOW ಪೀವರ್ ನ ಆತಂಕ ದೇಶದ ಜನರಿಗೆ ಹೆಚ್ಚಾಗುತ್ತಿದ್ದು ಕೇಂದ್ರ ಆರೋಗ್ಯ ಇಲಾಖೆ ಕಟ್ಟು ನಿಟ್ಟಿನ ಕ್ರಮವಹಿಸುವಂತೆ ಸೂಚಿಸಿದೆ.ದೇಶದಲ್ಲಿ ಕೋವಿಡ್ ಬೆನ್ನಲ್ಲೇ ಮತ್ತೊಂದು ಹೊಸ ವೈರಸ್ ಭೀತಿ ಶುರುವಾಗಿದೆ ಹೌದು ಈಗಾಗಲೇ ಸೌತ್ ಆಫ್ರಿಕಾ, ಕೀನ್ಯಾ, ನೈಜೀರಿಯಾ, ಉಗಾಂಡ, ರಿಪಬ್ಲಿಕ್ ಆಫ್ ಕಾಂಗೋ, ದಕ್ಷಿಣ ಅಮೆರಿಕಾದ ಕೆಲ ಭಾಗದಲ್ಲಿ ಹಳದಿ ಜ್ವರ ಎಂಬ ಮಹಾಮಾರಿ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ,ಇದರಿಂದಾಗಿ ಎಚ್ಚೆತ್ತು ಕೊಂಡಿರುವ ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರಾಜ್ಯಗಳಿಗೆ ಹೊರದೇಶದಿಂದ ಬರುವವರು ಹಾಗೂ ಹೊರ ದೇಶಕ್ಕೆ ತೆರಳುವವರ ಬಗ್ಗೆ ಗಮನವಹಿಸುವಂತೆ ಸೂಚಿಸಿದೆ, ಇನ್ನೂ ಸದ್ಯ ಬೆಂಗಳೂರಿನಲ್ಲಿ ಯಾವುದೇ ಕೇಸುಗಳು ಪತ್ತೆಯಾಗಿಲ್ಲ ಆದರೂ ರಾಜ್ಯ ಆರೋಗ್ಯ ಇಲಾಖೆ ಹೆಚ್ಚಿನ ನಿಗವಹಿಸುತ್ತಿದ್ದು ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಹಳದಿ ಜ್ವರದ ಲಸಿಕೆ ಲಭ್ಯವಾಗುವಂತೆ ಮಾಡಿದ್ದು ವಿದೇಶಕ್ಕೆ ಹೋಗೋರಿಗೆ ಹಳದಿ ಜ್ವರ ಲಸಿಕೆ ಕಡ್ಡಾಯ ಮಾಡಿದೆ.
ಇನ್ನೂ ಯಾರೆಲ್ಲ ಕೋವಿಡ್ ನಿಂದ ಬಳಲಿದ್ರೋ ಅವರಿಗೆ ಹಳದಿ ಜ್ವರ ತೀವ್ರವಾಗಿ ಕಾಡುತ್ತಿದೆ. ಹಳದಿ ವೈರಸ್ ನಿಂದ ಕಂಡು ಬರ್ತಿರುವ ಡೇಂಜರಸ್ ಎಲ್ಲೋ ಫೀವರ್ ತಲೆನೋವು, ಜ್ವರ, ವಾಂತಿ, ಮೈಕೈನೋವು ಅಲ್ಲದೇ ಜಾಂಡೀಸ್ ಥರದ ಲಕ್ಷಣ ಹಳದಿ ಜ್ವರ ಬಂದ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಹಳದಿ ಜ್ವರದಿಂದ ರಕ್ಷಿಸಿಕೊಳ್ಳಲು ಸ್ಟಾಮರಿಲ್ ಎಂಬ ಲಸಿಕೆ ಲೈಫ್ ಟೈಮ್ ರಕ್ಷಣೆ ನೀಡಲಿದ್ದು ರಾಜ್ಯ ಆರೋಗ್ಯ ಇಲಾಖೆ ಸದ್ಯ ವಿದೇಶ ಪ್ರಯಾಣ ಮಾಡುವರಿಗೆ ಮಾತ್ರ ಕಡ್ಡಾಯೊಳಿಸಿದ್ದು ಈ ಲಸಿಕೆಯ ದರ ಕೇಂದ್ರ ಆರೋಗ್ಯ ಇಲಾಖೆ ನಿಗಧಿ ಮಾಡಿದ ಹಾಗೆ 300 ರೂ ಗಳಂತೆ ನೀಡಲಾಗುತ್ತಿದೆ.ಕಾಯಿಲೆಗಳು ಬಂದು ರೋಧನೆ ಪಡುವ ಮೊದಲೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮವನ್ನು ವಹಿಸಿರೋದು ಶ್ಲಾಘನೀಯ