Publish Date: Wed, 12 Apr 2023 (12:19 IST)
Updated Date: Wed, 12 Apr 2023 (12:42 IST)
ಬೆಳಗಾವಿ : ಜನರು ನನ್ನನ್ನು ತೇಲು ಎಂದರೆ ತೇಲುತ್ತೇನೆ, ಮುಳುಗು ಎಂದರೆ ಮುಳುಗುತ್ತೇನೆ, ಮನೆಯಲ್ಲಿಯೇ ಇರು ಎಂದರೆ ಇರುತ್ತೇನೆ. ಸ್ಪರ್ಧೆ ಮಾಡು ಎಂದರೆ ಮಾಡುತ್ತೇನೆ ಎಂದು ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದ್ದಾರೆ.
ಚಿಕ್ಕೋಡಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ವರ್ಷಗಳಿಂದ ಜನರು ನಾನು ಹೇಳಿದಂತೆ ಕೇಳಿದ್ದಾರೆ. ಆದರೆ ಈಗ ಜನರು ಹೇಳಿದಂತೆ ನಾನು ಕೇಳಬೇಕಾಗಿದೆ. ಈ ಬಾರಿ ನಾನು ಜನತಾ ನ್ಯಾಯಾಲಯಕ್ಕೆ ಹೋಗುತ್ತೇನೆ. ಜನರು ಹೇಗೆ ಹೇಳುತ್ತಾರೋ ಹಾಗೆ ಮಾಡುತ್ತೇನೆ. ನಾನು ಯಾರ ಬಗ್ಗೆಯೂ ಕಮೆಂಟ್ ಮಾಡುವುದಿಲ್ಲ.
ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿ. ಇದೇ ತಿಂಗಳು 13 ರಂದು ಕ್ಷೇತ್ರದ ಸಭೆ ಕರೆದು ನಂತರ ತೀರ್ಮಾನಿಸುತ್ತೇನೆ ಎಂದರು. ಈ ಕುರಿತು ಸಿಎಂ ನನ್ನ ಜೊತೆ ಮಾತನಾಡುತ್ತೇನೆ ಎಂದು ದೆಹಲಿಯಲ್ಲಿ ಹೇಳಿದ್ದಾರೆ. ಅವರು ನನ್ನನ್ನು ಸಂಪರ್ಕಿಸಿದ ನಂತರ ನನ್ನ ತೀರ್ಮಾನವನ್ನು ಮಾಡುತ್ತೇನೆ.