ಬೆಂಗಳೂರಿಗೆ ಝೀಕಾ ವೈರಸ್ನ ಭೀತಿ ಹೆಚ್ಚಾಗಿದೆ ರಾಜಧಾನಿಯಲ್ಲಿ ನಿತ್ಯ 50 ಕೇಸ್ಗಳು ಪತ್ತೆಯಾಗುತ್ತಿದ್ದು ರಾಜಧಾನಿ ಬೆಂಗಳೂರಿನಲ್ಲಿ ಆತಂಕ ಹೆಚ್ಚಿದೆ. ಡೆಂಘೀ ಜ್ವರಕ್ಕೆ ಕಾರಣವಾಗಿರುವ ಈಡೀಸ್ ಈಜಿಪ್ಟ್ ಜಾತಿಯ ಸೊಳ್ಳೆ ಕಚ್ಚುವುದರಿಂದಲೇ ಝೀಕಾ ವೈರಸ್ ಸೋಂಕು ತಗಲುತ್ತದೆ. ಒಂದೇ ವಾರದ ಅಂತರದಲ್ಲಿ ಒಟ್ಟು 1,982 ಡೆಂಗ್ಯೂ ಕೇಸ್ ಗಳು ಪತ್ತೆಯಾಗಿದೆ. ಹೀಗಾಗಿ ಡೆಂಘ್ಯೂ ಪ್ರಕರಣಗಳು ಜಾಸ್ತಿಯಾದ್ರೆ, ಝೀಕಾ ವೈರಸ್ ಪತ್ತೆಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.