Select Your Language

Notifications

webdunia
webdunia
webdunia
webdunia

ಹಿಂದಿ ಹಾಡಿಗೆ ವಧು ಮುಂದೆ ವರ ಸ್ಟೆಪ್ಸ್

Groom steps in front of bride to Hindi song
bangalore , ಶನಿವಾರ, 17 ಡಿಸೆಂಬರ್ 2022 (17:13 IST)
ಭಾರತೀಯ ಮದುವೆಗಳು ಒಂದು ರೀತಿಯ ಹಬ್ಬದಂತಿದ್ದು, ಇಡೀ ಮದುವೆ ಮನೆ ಒಂದು ವಾರದ ಮಟ್ಟಿಗೆ ಸಂತೋಷ ಮತ್ತು ಉತ್ಸಾಹದಿಂದ ತುಂಬಿರುತ್ತದೆ. ಅದರಲ್ಲೂ ಮೆಹಂದಿ ಕಾರ್ಯಕ್ರಮ ಮತ್ತು ಇನ್ನಿತರೆ ಮದುವೆ ಪೂರ್ವ ಕಾರ್ಯಕ್ರಮಗಳು, ಮದುವೆ ಮನೆಯಲ್ಲಿ ಡ್ಯಾನ್ಸ್ ಮತ್ತು ಸಂಗೀತವಂತೂ ಇದ್ದೇ ಇರುತ್ತದೆ. ಇವೆರಡೂ ಇಲ್ಲದೆ ಮದುವೆ ಕಾರ್ಯಕ್ರಮಗಳು ಅಪೂರ್ಣ ಅಂತಾನೆ ಹೇಳಬಹುದು. ಇನ್ನು ಸಂಗೀತ್ ಕಾರ್ಯಕ್ರಮವಂತೂ ಕೇಳೋದೆ ಬೇಡ, ಆ ರೀತಿಯಲ್ಲಿ ಜೋಶ್ ಇರುತ್ತದೆ. ಈ ಮದುವೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ವಧು ಮತ್ತು ವರನ ಸ್ನೇಹಿತರು, ಸಹೋದರ ಮತ್ತು ಸಹೋದರಿಯರು ಎಲ್ಲರೂ ಅವರವರ ಆಯ್ಕೆಯ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಾರೆ. ಅನೇಕ ವಧು-ವರರು ತಮ್ಮ ಸಂಗಾತಿಗೆ ತಮ್ಮ ವಿಶೇಷ ದಿನದಂದು ಸರ್‌ಪ್ರೈಸ್ ನೀಡಬೇಕೆಂದು ಮುಂಚಿತವಾಗಿಯೇ ಯಾವ ರೀತಿಯ ಪ್ರದರ್ಶನಗಳನ್ನು ನೀಡಬೇಕು ಅನ್ನೋದನ್ನ ಯೋಜಿಸುತ್ತಾರೆ. ಇಲ್ಲೊಂದು ವೀಡಿಯೋದಲ್ಲಿ ಕೆಲವು ಸೆಕೆಂಡುಗಳ ನಂತರ, ವರನು ಎದ್ದು ನಿಂತು ‘ಚಾಂದ್ ಸಿ ಮೆಹಬೂಬಾ ಹೋ ಮೇರಿ’ ಎಂಬ ಹಿಂದಿ ಹಾಡಿಗೆ ರೋಮ್ಯಾಂಟಿಕ್ ಆಗಿ ಚಿಕ್ಕ ಡ್ಯಾನ್ಸ್​​​ ಪ್ರದರ್ಶನವನ್ನು ನೀಡುತ್ತಾನೆ. ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಕಚೇರಿಯಲ್ಲಿ ಕಳ್ಳತನ