Select Your Language

Notifications

webdunia
webdunia
webdunia
webdunia

ಆಟೋದಿಂದ ಬಿದ್ದು ಮಹಿಳೆ ಸಾವು

ಆಟೋದಿಂದ ಬಿದ್ದು ಮಹಿಳೆ ಸಾವು
chamarajanagara , ಶನಿವಾರ, 17 ಡಿಸೆಂಬರ್ 2022 (16:44 IST)
ಅಂತ್ಯಕ್ರಿಯೆ ಮುಗಿಸಿ ವಾಪಸ್ಸಾಗುವಾಗ ಆಟೋದಿಂದ ಬಿದ್ದು ಮಹಿಳೆ ಸಾವನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಸಮೀಪ ನಡೆದಿದೆ. 49 ವರ್ಷದ ಹೊನ್ನೂರು ಗ್ರಾಮದ ದೊಡ್ಡಮ್ಮ ಮೃತ ದುರ್ದೈವಿಯಾಗಿದ್ಧಾಳೆ. ಹೊನ್ನೂರು ಗ್ರಾಮದಲ್ಲಿ ಚಾಮುಂಡಮ್ಮ ಎಂಬ ಮಹಿಳೆ ವಯೋಸಹಜವಾಗಿ ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅದೇ  ಗ್ರಾಮಕ್ಕೆ ದೊಡ್ಡಮ್ಮ ಬಂದಿದ್ದಳು. ಗ್ರಾಮದ ಹೊರ ವಯಲದಲ್ಲಿರುವ ಸ್ಮಶಾನಕ್ಕೆ ತೆರಳಿ ಆಟೋದಲ್ಲಿ ವಾಪಸ್ಸಾಗುವಾಗ ಘಟನೆ ಸಂಭವಿಸಿದೆ. ಆಟೋದಿಂದ ಬಿದ್ದು ತೀವ್ರ ರಕ್ತಸ್ರಾವವಾಗಿ ಅಸುನೀಗಿದ್ದಾರೆ. ಯಳಂದೂರು ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಧಾರ್ ಜೋಡಣೆ ಇಲ್ಲದಿದ್ರೂ ಮತದಾನ