Publish Date: Mon, 18 Mar 2019 (15:29 IST)
Updated Date: Mon, 18 Mar 2019 (15:31 IST)
ಹಾವೇರಿ-ಗದಗ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಮೈತ್ರಿ ಸರ್ಕಾರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಆ ಅಭ್ಯರ್ಥಿಗೆ ಜೆಡಿಎಸ್ ಪಕ್ಷದಿಂದ ಸಂಪೂರ್ಣವಾಗಿ ಬೆಂಬಲ ಸೂಚಿಸುತ್ತೇವೆ. ಮೈತ್ರಿ ಪಕ್ಷದ ಅಭ್ಯರ್ಥಿ ಗೆಲುವು ಪಕ್ಕಾ ಅಂತ ಮುಖಂಡರು ಹೇಳ್ತಿದ್ದಾರೆ.
ನಮ್ಮ ಅಭ್ಯರ್ಥಿಯೇ ಗೆಲವು ಸಾಧಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹಾವೇರಿ ಜಿಲ್ಲಾ ಜೆಡಿಎಸ್ ಪ್ರಾಧಾನ ಕಾರ್ಯದರ್ಶಿ ಸಂಜಯ್ ಡಾಂಗೆ ಹಾವೇರಿಯಲ್ಲಿ ಹೇಳಿದ್ರು. ಈ ಬಾರಿ ಜೆಡಿಎಸ್ ಪಕ್ಷದಿಂದ ಯಾವ ಅಭ್ಯರ್ಥಿ ಕಣಕ್ಕಿಳಿಯುವುದಿಲ್ಲ. ಆದರೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಇರುತ್ತದೆ.
ನಾವು ಎರಡು ಪಕ್ಷಗಳ ಝಂಡಾ ಹಿಡಿದುಕೊಂಡು ಮತದಾರರ ಹತ್ತಿರ ಮತ ಯಾಚನೆ ಮಾಡುತ್ತೇವೆ ಎಂದ್ರು. ಈ ಬಾರಿ ಬಿಜೆಪಿ ಪಕ್ಷದಿಂದ ಯಾವ ಅಭ್ಯರ್ಥಿ ಕಣಕ್ಕಿಳಿದರೂ ಸಹಿತ ನಮ್ಮ ಅಭ್ಯರ್ಥಿಯೆ ಗೆಲುವನ್ನ ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿಯವರು ಸಂಸದಾಗಿದ್ದರು ಕೂಡಾ ಅವರು ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ ಎಂದು ಅವರ ವಿರುದ್ದ ವಾಗ್ದಾಳಿ ನಡೆಸಿದರು.