ಸೋಮಶೇಖರ್ ಮನೆ ಮುಂದೆ ಜಮೀರ್ ಅಹಮ್ಮದ್ ಬೆಂಬಲಿಗರಿಂದ ಪ್ರತಿಭಟನೆ

ಸೋಮವಾರ, 13 ಜನವರಿ 2020 (10:59 IST)
ಬಳ್ಳಾರಿ : ಶಾಸಕ ಸೋಮಸೇಖರ್ ರೆಡ್ಡಿ ಪ್ರಚೋದನಾಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಮಶೇಖರ್ ರೆಡ್ಡಿ ಅವರ ಮನೆಮುಂದೆ  ಮಾಜಿ ಸಚಿವ ಜಮೀರ್ ಅಹಮ್ಮದ್ ಬೆಂಬಲಿಗರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.ಸೋಮಶೇಖರ್ ಮನೆ ಮುಂದೆ ಜಮೀರ್ ಅಹಮ್ಮದ್ ಪ್ರತಿಭಟನೆ ನಡೆಸಲು ಅನುಮತಿ ಇಲ್ಲದಿದ್ರೂ ಪ್ರೊಟೆಸ್ಟ್ ಮಾಡಲು ಜಮೀರ್ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.


ಬಳ್ಳಾರಿ ನಗರದ ಹೊಸಪೇಟೆ ರಸ್ತೆಯ ಕಂಟ್ರಿ ಕ್ಲಬ್ ಬಳಿ ಜಮೀರ್ ಬೆಂಬಲಿಗರು ಧರಣಿ ನಡೆಸಲಿದ್ದು, ಈ ಹಿನ್ನಲೆಯಲ್ಲಿ ರೆಡ್ಡಿ ನಿವಾಸದ ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಯೇಸು ಪ್ರತಿಮೆ ನಿರ್ಮಾಣ ; ಇದು ಮತಾಂತರ ಮಾಡುವ ಹುನ್ನಾರ