ಯೇಸು ಪ್ರತಿಮೆ ನಿರ್ಮಾಣ ; ಇದು ಮತಾಂತರ ಮಾಡುವ ಹುನ್ನಾರ

ಸೋಮವಾರ, 13 ಜನವರಿ 2020 (10:48 IST)
ರಾಮನಗರ: ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿವಾದ ವಿಚಾರ ಸುಮಾರು ವರ್ಷಗಳಿಂದ ಮತಾಂತರ  ಮಾಡುವ ಹುನ್ನಾರ ನಡೀತಿದೆ ಎಂದು ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ ಆರೋಪಿಸಿದ್ದಾರೆ.ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕಪುರದಲ್ಲಿ ಇದು ರಾಜಕೀಯವಾಗಿ ನಡೀತಿರುವ ಆರೋಪ. ಸಮಾಜವನ್ನು ತಪ್ಪುದಾರಿಗೆ ಕೊಂಡೊಯ್ಯುವ ಹುನ್ನಾರ ನಡಿತಿದೆ. ಡಿಕೆ ಶಿವಕುಮಾರ್ ಬ್ರದರ್ಸ್ ಹುನ್ನಾರ ಮಾಡಿದ್ದಾರೆ. ಕಪಾಲಿ ಬೆಟ್ಟದಲ್ಲಿದ್ದ ಮುನೇಶ್ವರ ದೇವಾಲಯವನ್ನು ಮುಚ್ಚಿ ಈಗ ಯೇಸು ಪ್ರತಿಮೆ ನಿರ್ಮಾಣ ಮಾಡುತ್ತಿರುವುದು ಮೋಸ. ಹೀಗಾಗಿ ಇದರ ವಿರುದ್ಧ ನಾವು ಹೋರಾಟವನ್ನು ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿಯೊಬ್ಬ ವಿವಿಗೆ ನುಗ್ಗಿ ಮಾಡಿದ್ದೇನು ಗೊತ್ತಾ?